ಜೀವ ಉಳಿಸಿ

ಜೀವ ಉಳಿಸಿ
~~~~~~~
ಲೋಕದಲ್ಲಿ ಹಬ್ಬ ಮದುವೆ ಜೋರು
ಜೊತೆಗೆ ಇರಲೇಬೇಕು ಹಾಲು ಕೀರು
ವರನ ಪಾದದ ಪೂಜೆಗೆ ತಯಾರು
ಧಾರಾ ಕೈಂಕರ್ಯಕೆ ಜತೆಗೂಡಿದರು

ಜನನಕೂ ಮೊದಲಿರಬೇಕು ಜಲ
ಜಳಕದ ಬಳಿಕವೇ ಸಕಲ ಕಲಕಲ
ಮರಣದ ಜೊತೆ ಜೊತೆಗೆ ಬೇಕಲ್ಲ 
ಬಳಗ ಬಾಯಿಗೆ ಬಿಟ್ಟು ಗಂಗಾಜಲ

ಅಖಿಲ ಜೀವಿಗಳ ಸರ್ವ ಸಂತಸಕೂ
ಜಿನ ವನ ದೇವನ ಹೋಮ‌ ಹವನಕೂ
ಮಸಣದೊಳಗಣ ಕೊನೆಯ ಕರ್ಮಕೂ
ಪ್ರಾಣ ಹೋಗಲು ಜೀವಜಲವಿರಬೇಕು

ಹನಿ ಹನಿ ನೀರನ್ನುಳಿಸಿ ಜೀವ ಉಳಿಸಿ
ಜಲವುಳಿದರೆ ಜಗವುಳಿದಂತೆ ಎನಿಸಿ
ಈ ಕವನವ ಗೆಳೆಯರಿಗೆ ಜೋಡಿಸಿ
ನೀರು ಉಳಿಸಲು ತಾವು ಸಹಕರಿಸಿ

ವೈಲೇಶ ಪಿ ಯೆಸ್ ಕೊಡಗು
೨೨/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು