ಗಝ಼ಲ್ : ೨೫
ವಿಶ್ವ ಜಲದಿನದಿ ಸವಿ ನೆನಪಿಗೆ ಜಗದ ಸಕಲ ಮನಕೆ ಜಲವನುಳಿಸಲು ಕೋರಿಕೆ
ಗಝ಼ಲ್ : ೨೫
~~~~~~~~
ಜನನ ಮರಣಕೂ ಮುನ್ನ ಇರಲೇಬೇಕು ಗೆಳೆಯ ಜೀವ ಜಲ
ಹಬ್ಬ ಹರಿದಿನಕೂ ಕಳಸದಿ ತರಲೇಬೇಕು ಗೆಳೆಯ ಜೀವ ಜಲ
ರೈತರು ಬೆಳೆ ಬೆಳೆಯಲು ಬೆಳೆದ ಬೆಳೆಯನು ವಿಕ್ರಯಿಸೆ ಬೇಕು
ಕ್ರಯಿಸಿ ತಂದ ದಿನಸಿ ಬೇಯಿಸಲಿರಬೇಕು ಗೆಳೆಯ ಜೀವ ಜಲ
ವನಸುಮದ ಗಮಲು ತೇಲಿ ಬರುತಿರಲು ಮನದೊಳಾನಂದ
ವನವು ಸುಮವನ್ನೀಯಲು ಇಳಿದಿರಬೇಕು ಗೆಳೆಯ ಜೀವ ಜಲ
ಕಡಲ ಒಡಲಾಳದ ಚರಾಚರಗಳ ಪ್ರಾಣವುಳಿಯಲು ಇರಬೇಕು
ಕಡಲದು ಬತ್ತಿದರೆ ಎತ್ತಲಿಂದ್ಯಾರು ಇರಬೇಕು ಗೆಳೆಯ ಜೀವ ಜಲ
ನೆಲದ ಒಡಲ ಅತಿಶಯದಿ ಬಗೆದು ಶುದ್ಧದಾ ನೀರ ಮುಗಿಸಾಯ್ತು
ಹಗಲಿರುಳು ಎರೆದಿರಲು ಇನ್ನೆಲ್ಲಿಂದ ಬರಬೇಕು ಗೆಳೆಯ ಜೀವ ಜಲ
ನೀರನುಳಿಸಲು ಪಣವ ತೊಟ್ಟಿಹ "ಸಿಡಿಲನ" ಮನದಿಂಗಿತವನರಿತು
ಜೊತೆಗೂಡಿ ಕರವ ಜೋಡಿಸಿ ಉಳಿಸಲೇಬೇಕು ಗೆಳೆಯ ಜೀವ ಜಲ
ವೈಲೇಶ ಪಿ ಯೆಸ್ ಕೊಡಗು
೨೨/೩/೨೦೧೮
Comments
Post a Comment