ಗಝ಼ಲ್ : ೨೬
ಗಝ಼ಲ್ : ೨೬
~~~~~~~~
ಯುಗಾದಿ ದಿನವಷ್ಟೇ ಬೇವು-ಬೆಲ್ಲ ತಿನ್ನುವವರಲ್ಲ ಸಾಕಿ ನಾವುಗಳು
ಜವಾಬ್ದಾರಿಯ ನೆಪದಿ ಬೇವು ಮೇಯುವವರೆಲ್ಲ ಸಾಕಿ ನಾವುಗಳು
ಜೀವನದಲಿ ಚಿನ್ನದ ಚಮಚವ ಹೊತ್ತು ತಂದವರು ನಾವಾದರೇನು
ನೋವು ನಲಿವು ಚಿಂತೆಯ ಮೆರೆಯಲಾರದವರಲ್ಲ ಸಾಕಿ ನಾವುಗಳು
ಸುರರರಸು ಇಂದ್ರನಿಗೂ ಬಡತನವ ಹಾಸಿ ಹೊದ್ದ ನರನಿಗೂ ತಪ್ಪಿಲ್ಲ
ಮನದ ಮೂಸೆಯಲ್ಲಡಗಿದ ಸಿಹಿ ಕಹಿಗೆ ಹೊರತಲ್ಲ ಸಾಕಿ ನಾವುಗಳು
ನಿತ್ಯದ ಬದುಕೇ ಇದು ಹೀಗೆ ನಾವು ನೆನೆಸಿದಂತೆ ನಮ್ಮಾಟ ಸಾಗದಲ್ಲ
ಜಗದ ನಿಯಮವನು ಮೀರಿ ಸಾಧಿಸಲು ಸಾಧ್ಯವಿಲ್ಲ ಸಾಕಿ ನಾವುಗಳು
ಕೇವಲ ಒಮ್ಮೆಯಾದರೂ ಜಗವ ನಗಿಸುವ ಪ್ರಯತ್ನವು ನಮದಾಗಿರಲಿ
ನೋಡಿ ನಗುವವರ ಮುಂದೆ ಜಾರಿ ಬೀಳದವರಾರಿಲ್ಲ ಸಾಕಿ ನಾವುಗಳು
ಒಟ್ಟಾರೆ ಬಂದು ಹೋಗುವ ನಡುವೆ ನಾವೆಲ್ಲಾ ಒಂದೇ ಎಂಬರಿವಿರಲಿ
"ಸಿಡಿಲನು" ಸೇರಿ ಅವನಾಟವನು ಮೀರಬಲ್ಲವರಲ್ಲ ಸಾಕಿ ನಾವುಗಳು
ವೈಲೇಶ ಪಿ ಯೆಸ್ ಕೊಡಗು
೨೪/೩/೨೦೧೮
Comments
Post a Comment