ಹೆಣ್ಣು ಮಣ್ಣು ಕಣ್ಣು
ಹೆಣ್ಣು ಮಣ್ಣು ಕಣ್ಣು
=============
ಸೃಷ್ಟಿ ಇದಕ್ಕಿರಲಿ ವೃಷ್ಠಿ
ಇದ್ದರೆ ವರುಣನ ದೃಷ್ಠಿ
ಇರುವುದೆಲ್ಲಾ ಸಮಷ್ಠಿ
ಸಕಲ ಜೀವಜಾಲದ ಪುಷ್ಠಿ
ಮಣ್ಣು ಹೆಣ್ಣಿನಂತಯೇ ಮಣ್ಣು
ಸಕಲ ಜೀವರಾಶಿಯ ಸೃಷ್ಟಿಕಣ್ಣು
ಪ್ರಕೃತಿ ಮಾತೆಯ ಜೀವಧಾತೆಯ
ಹರಿಯುವ ನದಿ ಹಳ್ಳ ತೊರೆಯ
ಬೆನ್ನೆಲುಬಾಗಿ ನಿಲ್ಲುವ ಈ ಮಣ್ಣು
ಕಡಲ ಕೊರೆತಕೆ ಸಿಲುಕಿ ನಲುಗುವ
ಅನ್ನಧಾತನ ನೇಗಿಲ ಗುಳಕೆ ನಗುವ
ನೋವುಂಡರು ರೈತರ ಸಿರಿ ಮೊಗವ
ಫಸಲಿನಿಂದಲೇ ಹೂವಂತೆ ಅರಳಿಸುವ
ರಸವತ್ತು ಪಡೆದು ಫಲವೀಯುವ ಮಣ್ಣು
ಬೀಜವನು ನುಂಗಿ ಮರವನೆ ನೀಡಿ
ಮರದಿಂದ ಮತ್ತೆ ಬೀಜವನು ನೋಡಿ
ಯಾರಿಂದೇನೂ ಬಯಸದಂತೆ
ಸಂತಸ ಹುಮ್ಮಸ್ಸು ನೀಡುವುದಂತೆ
ಫಸಲು ಬೆಳೆದು ಪಲವತ್ತು ನಶಿಸಿದ ಮಣ್ಣು
ಹೆಬ್ಬಂಡೆ ಹೆಮ್ಮರ ಹಿರಿದಾದುದೆಲ್ಲ
ನಿಂತು ನಗಲು ಮಣ್ಣು ಇರಲೇಬೇಕಲ್ಲ
ಪಶು ಪಕ್ಷಿ ಗಿಡಮರಗಳಾಧಾರವೀ ಮಣ್ಣು
ಮಣ್ಣಿಲ್ಲದಿರೆ ಮನುಜ ಬಿಡಲಾರ ಕಣ್ಣು
ಹುಟ್ಟಿ ಮೆಟ್ಟಿ ಗಟ್ಟಿ ನಿಲ್ಲಲು ಬೇಕು ಮಣ್ಣು
ಮಣ್ಣು ಮುಚ್ಚಲು ಬೇಕು ನಾವ್ಮುಚ್ಚಿದಾಗ ಕಣ್ಣು
ವೈಲೇಶ ಪಿ ಯೆಸ್ ಕೊಡಗು
20/3/17
Comments
Post a Comment