ಗಝ಼ಲ್ : ೨೭
ಗಝ಼ಲ್ : ೨೭
~~~~~~~~
ಘಮಲಿನ ಅಮಲೇರಿಸುವ ಬಟ್ಟಲು ಇದಲ್ಲವೇ ಹೇಳು ಸಾಕಿ
ಅಮಲಿನಲಿ ಮುಳುಗೇಳಿಸಿ ಬತ್ತಲು ಮಾಡಿಲ್ಲವೇ ಹೇಳು ಸಾಕಿ
ಮಧು ಬಟ್ಟಲಲಿ ಮೈಮೆರೆವ ನಿನ್ನಂದಕೆ ಸಾಟಿ ಯಾರು ಹೇಳು
ಮುತ್ತ ಮತ್ತಿನಲಿ ಮೈಮರೆವ ಚಟ ನನ್ನದಲ್ಲವೇ ಹೇಳು ಸಾಕಿ
ಕುಡಿದ ನೆಪದಲಿ ಕಡಿದ ಸಂಬಂಧ ಮತ್ತೆ ಬರುವುದೇ ಅರಿಯೆ
ಕುಡಿತಕದಕ್ಕೊಂದು ಹಿತದ ಹಿಡಿತವಿರಬೇಕಲ್ಲವೇ ಹೇಳು ಸಾಕಿ
ಪ್ರೀತಿಸಿದ ಮಾತ್ರಕ್ಕೆ ಮದ್ಯಪಾನ ದ್ವೇಷವಾ ಕಟ್ಟಿಕೊಳ್ಳುವುದೇಕೆ
ದ್ವೇಷ ರಹಿತವಾಗಿ ಜಗವನು ಪ್ರೀತಿಸಲು ಸಾದುವೇ ಹೇಳು ಸಾಕಿ
ಕಲ್ಪನೆಯ ಕನಸದು ಕುಡುಕನದು ಎಂದೆನುವರೆಲ್ಲರೂ ಅಲ್ಲವೇ
ಕುಡುಕ ಕಲ್ಲು ಕರಗುವ ಕಥೆಗಳ ಕಟ್ಟಬಲ್ಲವನಲ್ಲವೇ ಹೇಳು ಸಾಕಿ
ಸಿಡಲಿನ ಮನದ ಬಯಕೆಯೊಂದು ಬಾಕಿಯೇ ಉಳಿದಿದೆಯೆನ್ನಲೇ
ಬದುಕಿನಲಿ ಸಿಹಿ ಬಯಕೆಗಳೆಲ್ಲಾ ಈಡೇರಲಾರದಲ್ಲವೇ ಹೇಳು ಸಾಕಿ
ವೈಲೇಶ ಪಿ ಯೆಸ್ ಕೊಡಗು
೧/೪/೨೦೧೮
Comments
Post a Comment