ಗಝ಼ಲ್ : ೨೯
ಗಝ಼ಲ್ : ೨೯
~~~~~~~~
ಜಗದ ತಮವ ಅಳಿಸಲು ಅರ್ಕನು ಆಗಮಿಸಲಿ ಬೆಳಕಿನೊಂದಿಗೆ
ಇರುಳ ಮಬ್ಬನು ಚಂದಿರನು ಚಂದದಿ ಕರಗಿಸಲಿ ಬೆಳಕಿನೊಂದಿಗೆ
ಅರಿವಿನ ಕೊರತೆಯಲಿ ಅಳಿವಿನಂಚಿಗೆ ನಡೆದಿಹೆನು ತಿಳಿಯದೆಲೆ
ಮನದ ಕತ್ತಲನಳಿಸಲು ಜ್ಞಾನವು ಉದಯಿಸಲಿ ಬೆಳಕಿನೊಂದಿಗೆ
ಉಳಿವು ಆಳಿವು ನಮ್ಮಯ ನಡವಳಿಕೆಯಲ್ಲಡಗಿದೆ ಎಂದೆನುವೆನೆ
ಇರುಳು ಕವಿದ ಮನವು ತಪ್ಪುಗಳನು ಅರಿಯಲಿ ಬೆಳಕಿನೊಂದಿಗೆ
ಮನುಜ ಮಾತ್ರರಲಿ ಕೇಡು ಕಿಚ್ಚುಗಳಡಗಿವೆ ಅನಿಸುತ್ತಿದೆಯಲ್ಲವೇ
ಸರಿ ತಪ್ಪುಗಳನು ವಿಶ್ಲೇಷಿಸಿ ಮುನ್ನಡೆಯುತಿರಲಿ ಬೆಳಕಿನೊಂದಿಗೆ
ಸಕಲ ಜೀವ ಸಂಕುಲಕೆ ಬೆಳಕೆಂದಿಗೂ ಅನಿವಾರ್ಯ ಅತ್ಯಗತ್ಯ
ಲೋಕದೊಳು ಸೂರ್ಯ ಚಂದ್ರರು ಮೆರೆದಿರಲಿ ಬೆಳಕಿನೊಂದಿಗೆ
ಸಿಡಿಲನ ಬದುಕಿಗೆ ಕವಿದಿರುವ ಗಾಢಾಂಧಕಾರವನು ಅಳಿಸಬೇಕಿದೆ
ಶ್ರೀ ಬೊಮ್ಮಲಿಂಗೇಶ್ವರ ಅಂಧಕಾರ ಅಳಿಸಿ ಬಿಡಿಲಿ ಬೆಳಕಿನೊಂದಿಗೆ
ವೈಲೇಶ ಪಿ ಯೆಸ್ ಕೊಡಗು
೫/೪/೨೦೧೮
Comments
Post a Comment