ಗೆಳೆತನ
ಗೆಳೆತನ
======
ಅಣ್ಣ ತಮ್ಮ ಬಂಧುತ್ವ ಮೀರಿ
ಸಂಕೋಚ ದುಃಖವ ಮಾರಿ
ಸ್ನೇಹವೆಂದರೆ ತಂದೆ ತಾಯಿ
ಸ್ನೇಹದ ನೋವು ಮಾಯಿ
ಗೆಳೆತನದ ಒಂದು ಸಂತೆ
ಇದ್ದರಿಲ್ಲ ಯಾವ ಚಿಂತೆ
ಕಷ್ಟ ಸುಖಕ್ಕೂ ನಿಶ್ಚಿಂತೆ.
ಗೆಳೆತನಕ್ಕಿಲ್ಲ ಜಾತಿ ಕುಲ
ಲಿಂಗಭೇದ ಸಂಗಕ್ಕಿಲ್ಲ
ಶುದ್ಧ ಹಸ್ತವೇ ಸಕಲ
ನಿರೀಕ್ಷೆಗಿಲ್ಲಿ ಅವಕಾಶವಿಲ್ಲ
ಅಪಾರ್ಥಕ್ಕೆ ಎಡೆಯಿಲ್ಲ
ಸ್ನೇಹವೆಂದರೆ ಅವನಿಯಂತೆ
ಸ್ನೇಹವೆಂದರೆ ಬಾನಿನಂತೆ.
ಸ್ನೇಹ ಮುರಿಯುವ ಮುನ್ನ
ಮಥಿಸಿರಿ ಮಾಡಿದ ತಪ್ಪುಗಳನ್ನ
ಇಂದು ನಿನ್ನೆಯದೇನೂ ಹೊಸದಲ್ಲ
ಕೆಲವರು ಬೇಗ ಮರೆಯುವವರಲ್ಲ
ಹಲವರಿಗೆ ಕ್ಷಮಾಗುಣವಿರುವುದಿಲ್ಲ
ವೈಲೇಶ ಪಿ ಯೆಸ್ ಕೊಡಗು
18/3/17
Comments
Post a Comment