ಸಲಹುತಿದೆ ಜಗತ್ತು

ಸಲಹುತಿದೆ ಜಗತ್ತು
~~~~~~~~~~
ಭಸ್ಮವನು ಬಳಿದಿಲ್ಲ ನಾನೆಂದಿಗೂ ಶಿವನಲ್ಲ
ವಜ್ರವನು ಧರಿಸಿಲ್ಲ ವೆಂಕಟೇಶನು ನಾನಲ್ಲ 
ವಚನವ ಬರೆದಿರುವ ಬಸವಣ್ಣ ನಾನಾಗಿಲ್ಲ
ಸಂವಿಧಾನ ಅರಿತಿರುವ ಭೀಮಣ್ಣನ ಸಮನಲ್ಲ.

ಎರಡು ಗೆರೆ ಗೀಚುವೆ ಶಾರದೆಯ ಹೊರತಲ್ಲ
ಬುದ್ಧಿ ಮಾತನಾಡಲು ಉಪಾಧ್ಯಾಯ ಆಗಿಲ್ಲ
ನಿಜವ ನುಡಿದರೆ ತಾವು ತಲೆಯಾಡಿಸುವೆನಲ್ಲ
ಮಿಥ್ಯೆಗೆಂದೆಂದಿಗೂ ತಲೆ ಬಾಗುವ ಮನವಿಲ್ಲ

ಬೇಡವೆಂದರೂ ಬೇಡದೇ ದುಡಿದು ಉಣ್ಣುವೆ
ಬೇಡುವ ಅಗತ್ಯ ಇದ್ದವರಿಗೆ ಬೇಡದೆ ನೀಡುವೆ
ಬೇಡವೆಂದರೂ ಹಲವರ ಕಂಡು ಬೇಸರಿಸುವೆ
ಬೇಕು ಬೇಡ ಎಂದೆನದಿದ್ದರೂ ನನ್ನಾಕೆ ಸಮವೇ

ನೀತಿಗೆ ನೀಡಿ ಮಹತ್ತು ಜಾತಿಗೆ ಇಲ್ಲಿಲ್ಲ ಜರೂರತ್ತು
ನಮ್ಮ ನಿಯಮಕೆ ಯಾರೂ ನೀಡಲಿಲ್ಲ ಹಕೀಕತ್ತು
ಹೆತ್ತವರ ನುಡಿಮುತ್ತುಗಳಿಗೆ ನಮ್ಮಗಳ ನೀಯತ್ತು
ನೆಮ್ಮದಿಯಿಂದ ಸಾಕಿ ಸಲಹುತ್ತಿದೆ ಸೃಷ್ಟಿಸಿ ಜಗತ್ತು

ವೈಲೇಶ ಪಿ ಯೆಸ್ ಕೊಡಗು
೨೪/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು