ವಿಮರ್ಶೆ

ವಿಮರ್ಶೆ
~~~~~
ಹೆತ್ತ ಕಂದನ ಕತ್ತ ಹಿಸುಕದೇ ಕಸದ ತೊಟ್ಟಿಯಲ್ಲಿಟ್ಟವಳು ತಾಯಿಯೇ

ನನ್ನ ಗಝ಼ಲ್ ನ ಕೇವಲ ಒಂದೇ ಒಂದು ಸಾಲಿನ ವಿಮರ್ಶೆ ನಿಮಗಾಗಿ. ಅದಕೂ ಮೊದಲು ಕೆಲ ಮಾತುಗಳು.

ಇಲ್ಲಿ ಕವಿ ತನ್ನ ಸಾಲುಗಳಲ್ಲಿ ಯಾವುದೇ ಚಿಹ್ನೆಗಳನ್ನು ಬಳಸಿಲ್ಲ ಕಾರಣ ಒಂದು ಕವಿತೆಯನ್ನು ಓದುಗ ದೊರೆಗಳಿಗೆ ಅರ್ಪಿಸಿದಾಗ ಓದುಗರ ಮನದ ಭಾವನೆಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಅದಕ್ಕಾಗಿ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬ ಮಾತು.

ತಾಯಿ ಎಂದರೆ ದೇವತೆಗಳಿಗೂ ಮಿಗಿಲು ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ‌ ತಾಯಿ ತಂದೆಯರ ಪೂಜಿಸೆಂದು ಹಿರಿಯರು ಸುಮ್ಮನೆ ಹೇಳಿರಲಾರರು.

ಅಷ್ಟೇ ಅಲ್ಲ ತಾಯಿ ತನ್ನ ಮಗುವಿನ ಜನನದ ಸಮಯದಲ್ಲಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಜನ್ಮ ನೀಡಿ ಮರುಜನ್ಮ ಪಡೆರುತ್ತಾರೆ. ಸಾಲದೆಂದು ಮಗುವಿಲ್ಲದೇ ಎದೆ ಹಾಲನ್ನು ಸಂಭಾಳಿಸುವ ಕಷ್ಟ ತಾಯಿಗಲ್ಲದೇ ಮತ್ತಾರಿಗೂ ಅರಿವಾಗದು. ಇಂದು ಹಿಂದು ಮುಂದು ಸಹ ಒಂದು ಮಗುವಿಗಾಗಿ ಅದೆಷ್ಟೋ ಪಾಡು ಪಟ್ಟು ಹರಕೆ ಹೊತ್ತು ಹೆತ್ತ ಕಂದನ ಕತ್ತು ಹಿಸುಕಲು ಮನಸ್ಸು ಮಾಡುವ ತಾಯಿ ಅದೆಂತಹ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿರಬಹುದು ಅಲ್ಲವೇ.

ಯಾರಿಂದಲಾದರೂ ಅತ್ಯಾಚಾರಕ್ಕೆ ಬಲಿಯಾದವಳೇ ಅಥವಾ ತನ್ನ ಮೋಜು ಮಸ್ತಿಗೆ ಅಹಂಗೆ ಸೊಕ್ಕಿಗೆ ಹಟಕ್ಕೆ ಆಟಕ್ಕೆ ವಂಚನೆ ಮಾಡ ಹೋಗಿ ಅಥವಾ ವಂಚಿತಳಾಗಿ ಯಾವುದೇ ಒಳ್ಳೆಯ ಕೆಟ್ಟ ಕಾರಣದಿಂದಾಗಿ ಕದ್ದು ಒಪ್ಪಿ ಅಥವಾ ತಪ್ಪಿ ಬಸಿರಾಗಿ ಮಗುವನ್ನು ಹೆತ್ತರೂ ಹೆರಿಗೆ ನೋವು ತಪ್ಪಿದ್ದಲ್ಲ.
ತಾಯಿ ಎನಿಸಿಕೊಳ್ಳುವುದು ತಪ್ಪುವುದಿಲ್ಲ. ಲೋಕಕ್ಕೆ ಅರಿತರೆ ತಾಯಿಯಲ್ಲ ಕನ್ಯೆ ಎಂದು ಒಪ್ಪುವುದಿಲ್ಲ.

ಸಮಾಜ ಸಮೂಹ ಮಾಧ್ಯಮ ಕುಟುಂಬ ಬಂಧುಗಳು ಎಲ್ಲರನ್ನೂ ವಂಚಿಸಿ ಕಣ್ತಪ್ಪಿಸಿ ಮಗುವನ್ನು ಹೆತ್ತರೂ ಸಾಕಲಾಗದ ಸಂಕಟ ಯಾರಿಗೆ ಬೇಕು ಅಕಟಕಟಾ.

ಇಷ್ಟೆಲ್ಲಾ ಆದರೂ ಹೇಗೇ ಹೆತ್ತರೂ ಮಗುವಿನ ಮೇಲಿನ ಮಮತೆಯಲಿ ಯಾವುದೇ ವ್ಯತ್ಯಾಸವನ್ನು ಕಾಣಲಾಗದು. ಇವೆಲ್ಲವನ್ನೂ ಮೀರಿದ ಯೋಚನೆ ಎಂದರೆ ವೇಶ್ಯೆ ತನ್ನ ಕಸುಬಿಗೆ ಅಡ್ಡವಾಯಿತೆಂದು ಹೆತ್ತ ಮಗುವನ್ನು ಕೊಂದ ಉದಾಹರಣೆ ಇಲ್ಲಿಯವರೆಗೆ ನನ್ನ ಕಿವಿಗೆ ಇದುವರೆಗೆ ಬಿದ್ದಿಲ್ಲ ಯಾವುದೇ ಪತ್ರಿಕೆಯಲ್ಲಿ ಓದಿಲ್ಲ. ಅದೆಷ್ಟೋ ವೇಶ್ಯೆಯರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉತ್ತಮ ಪ್ರಜೆಯಾಗಿಸಿದ ಉದಾಹರಣೆಗಳು ಚಲನಚಿತ್ರದಲ್ಲಿ ಕಥೆಗಳಲ್ಲಿ ನಾವೆಲ್ಲರೂ ಕೇಳಿದ್ದೇವೆ ಓದಿದ್ದೇವೆ ನೋಡಿದ್ದೇವೆ. 

ನಾಯಿಯಾದರೂ ತಾಯಿ. ತಾಯಿ ತನ್ನ ಮಗುವನ್ನು ಕೊಲ್ಲಲು ಪ್ರಯತ್ನಿಸಿದ ಪ್ರಕರಣಗಳಲ್ಲಿ ಹೆಚ್ಚಿನ ಕಾರಣ ಎಂದರೆ ಅಕ್ರಮ ಸಂಬಂಧ ಒಂದೇ. ಅಂದರೆ ಮಗುವಿನ ದೆಸೆಯಿಂದಾಗಿ ನನ್ನ ಪ್ರಾಣಕ್ಕೆ ಮಾನಕ್ಕೆ ಕುಟುಂಬ ಜೀವನಕ್ಕೆ ಭಂಗ ಸಂಭವನೀಯ ಕಾರಣದಿಂದಾಗಿ ಕೊಲ್ಲುವ ಪ್ರಯತ್ನ ಮಾಡಿರಬಹುದೇನೋ ಅಥವಾ ಅಲ್ಲಿ ಅವಳ ಪ್ರಿಯಕರನ ಪಾತ್ರವೇ ಹೆಚ್ಚಿಗೆ ಇರಬಹೂದೇನೋ ಅಲ್ಲವೇ. 

ಕದ್ದು ಬಸಿರಾದ ತಾಯಿ ಜಗದ ಕಣ್ಣಿಗೆ ಮಣ್ಣೆರಚಿ ಹೆತ್ತ ಮಗುವನ್ನು ಕೊಲ್ಲದೇ ಯಾರಿಗೂ ಕಾಣದ ರೀತಿಯಲ್ಲಿ ಎಲ್ಲಿಯೋ ಒಂದು ಕಡೆ ನಮ್ಮ ಕಣ್ಣಿಗೆ ಕಾಣದಂತೆ ಬದುಕಿರಲಿ ಎಂಬ ಭಾವದಿಂದ ತನ್ನದೇ ಮಗುವನ್ನು ಎಲ್ಲೋ ಒಂದು ಕಡೆ ಬಿಟ್ಟು ಬರಬಹುದೇ ಹೊರತು ಕೊಲ್ಲಲಾರಳು. ಯಾಕೆಂದರೆ ಅವಳು ತಾಯಿ. ಅದಕ್ಕೆ ಹೀಗೆ ಬರೆಯಬೇಕಾಯಿತು. ಇಲ್ಲಿ ಯಾರ ಮನವ ನೋಯಿಸುವ ಇರಾದೆಯಿಂದ ನನ್ನನ್ನು ಕಾಡುತಿದ್ದ ಮಾತುಗಳನ್ನು ತಮ್ಮ ಮುಂದೆ ಇಡುತಿದ್ದೇನೆ. ತಪ್ಪಾಗಿದ್ದರೆ ಕ್ಷಮೆ ಇರಲಿ ಧನ್ಯವಾದಗಳು.

ವೈಲೇಶ ಪಿ ಯೆಸ್ ಕೊಡಗು
೨೧/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು