ಸ್ಪರ್ಧೆಗಾಗಿ ಉಳಸಿರಿ-ಉಳಿಯಿರಿ

ಸ್ಪರ್ಧೆಗಾಗಿ ಚಿತ್ರ ಕವನ

ಉಳಿಸಿರಿ-ಉಳಿಯಿರಿ
~~~~~~~~~~~
ಮರುಕದಿ ಬೆರಗುಗೊಂಡು ಕುಳಿತೆನು
ಮರಗಳುರುಳಿ ಬರಡಾಗಿದೆ ಎನ್ನ ತನು
ಸವಿ ಮನದ ಭಾವಗಳ ನೀವರಿಯಿರಿ
ವೃಕ್ಷವೇ ನನ್ನ ಉಸಿರೆಂದು ಮನಗಾಣಿರಿ 

ಕ್ಷಣ ಬಳಕೆಯ ವಾಯು ದಿನಬಳಕೆಯ
ಜಲ ಕಾರಣ ವರುಣನಾಗಮನಕೆ ಅವಸರ
ಸುರಿದ ಹನಿ ಹನಿಯು ಎನ್ನೊಡಲಿಗಿಳಿಯಲು
ತರುಲತೆಗಳ ಉದುರಿದೆಲೆಗಳಿರಲಿ ಮತ್ತೆ ಚಿಗುರಿ

ಎನ್ನೊಲವ ಕಂದಮ್ಮಗಳುಮ್ಮಳಿಸುತಿವೆ
ತೀರದಾ ದಾಹದಿ ಬಳಲಿ ಬಸವಳಿದು ಬೆಂದು
ನಿಂದನೆಯಲ್ಲವಿದು ನಿವೇದನೆಯೆಂಬೆನು
ಮರೆತು ಮೆರೆಯದಿರಿ ಮರವ ಹನನಗೈದು

ಕೋಟಿ ಕಂದಮ್ಮಗಳ ಹೆತ್ತವಳು ನಾನು
ಬಿತ್ತದಿರಿ ನೀವು ಸ್ವಾರ್ಥದ ಚಿಂತನೆಗಳನು
ನಿಮಗೆಂದೆಲ್ಲವನು ತಂದೆ ತನುವಿನಂಗಳದಿ
ಹಡೆದವ್ವನಂತೆ ನಿಮ್ಮ ನಾ ಬಿಟ್ಟು ಹೋಗೆನು

ಸಕಲವನು ಹಂಚಿಕೊಳುತಲಿ ನೀವೂ ಬಾಳಿರಿ
ಸಕಲ ಜೀವ ವೈವಿಧ್ಯ ಸಂಕುಲಗಳ ಬದುಕಿಸಿರಿ
ಕೂಡಿಡಬೇಡಿರೋ ಹುಚ್ಚಪ್ಪಗಳಿರಾ ಹೆಚ್ಚೆಂದರೆ
ನನ್ನೊಳಡಗುವಲ್ಲಿಗೆ ಮುಗಿವುದು ನಿಮ್ಮಗಳಾಟ

ವೈಲೇಶ ಪಿ ಯೆಸ್ ಕೊಡಗು
೨೭/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು