ತಾತನ ಹಳ್ಳಿ

ತಾತನ ಹಳ್ಳಿ
~~~~~~~
ಹಳಿ ತಪ್ಪದ ರೈಲಿನಂತಹ ಹಳ್ಳಿಯು ಹಿಂದಿತ್ತು
ಊರ ತುಂಬಾ ಜನ ಜಾನುವಾರು ತುಂಬಿತ್ತು
ಹರಿದ ಅಂಗಿ ತೇಪೆ ಪಂಚೆಯು ಮೈ ಮುಚ್ಚಿತ್ತು
ಮನೆ ಹೆಂಗೆಳೆಯರ ಮನದ ತುಂಬ ತೃಪ್ತಿ ಇತ್ತು.

ಇರುವ ಒಂದೇ ಸೀರೆಯ ಮನೆಯವರ
ವಸ್ತ್ರಗಳ ಜೊತೆಗೆ ಹರಿವ ನೀರಿನ  ಹಳ್ಳದಲಿ
ಅರ್ಧ ಒಗೆದೊಣಗಿಸಿ ಇನ್ನರ್ಧ ಒಗೆದುಡುತಿದ್ದ
ಗೋಣು ಮುರಿಯೆ ದುಡಿಯುತ್ತಿದ್ದ ಕಾಲವಿತ್ತು.

ಗುರು ಹಿರಿಯರ ದೂರದಿ ನಿಂತು ನಮಿಸುತ್ತಿದ್ದ
ಜಡ್ಡುಗಟ್ಟಿದ ಒಲವ ಜೊತೆಗೆ ಬಲವ ಹೊಂದಿದ್ದ
ಗಟ್ಟಿಮುಟ್ಟು ರಟ್ಟೆ ಒಂದೇಟಿಗೆ ಹಟ್ಟಿಯ ಕೆಲಸದ  
ನಡುವೆ ಹಳ್ಳಿ ಜವಾಬ್ದಾರಿ ಹೊತ್ತ ಸಮೂಹವಿತ್ತು 

ಕೋಟಿ ವಿದ್ಯೆಯ ಜೊತೆ ಮೇಟಿ ವಿದ್ಯೆ ಅರಿತ
ಗುರುವಂತೆ ಕಲಿಸಿದಂತ ಹಿರಿಯ ಜೀವ ತಾತ
ಕೂಡು ಕುಟುಂಬದ ಒಡೆಯರು ಮನಸೋತ
ಅನಂತ ಮಕ್ಕಳು ಮೊಮ್ಮಕ್ಕಳ ಪಡೆದವರೀತ

ತಾವು ಬೆಳೆದುದ ಅವರಿವರು ಬೆಳದುದಕೆ ಅದಲು‌
ಬದಲಾಯಿಸಿ, ತನ್ನ ಮನದೊಳಗೆ ಹಲ ಮನಗಳ
ಬೆರೆಸಿ ಬದುಕಿಗೊಂದು ಅರ್ಥವನ್ನಿರಿಸಿ ಜಗದ
ಜನಕೆ ಬದುಕು ಕಲಿಸದ ತಾತ ನಿಮಗಿದೋ ನಮನ

ವೈಲೇಶ ಪಿ ಯೆಸ್ ಕೊಡಗು
೨೫/೦೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು