ಗೋವಿಂದರ ತಿದ್ದುಪಡಿ ಗಜ಼ಲ್ ೧೧

ಗಝ಼ಲ್ ಬಗ್ಗೆ ಅಪಾರ‌ ಮಾಹಿತಿ ಅರಿವು ಹೊಂದಿರುವ ನನ್ನ ಗಝ಼ಲ್ ಗುರುಗಳಾದ ಶ್ರೀಯುತ ಗೋವಿಂದ ಹೆಗಡೆಯವರು ನನ್ನ ಗಝ಼ಲ್ ನ ಆಶಯ ಉಳಿಸಿಕೊಂಡು ತಿದ್ದಿ ತೀಡಿದ ಒಂದು ಗಝ಼ಲ್

ಗಜ಼ಲ್ ೧೧
~~~~~~~
ಹಾರಾಡಿದವು ಬಾನಾಡಿ ಬಾಳಿದವು ಜೊತೆಗೂಡಿ ನಿಜ ಅಲ್ಲವೇ
ಹಾರಾಡುವ ಮಾನವ ಭಾವನೆಗಳ ಮರೆಮಾಡಿ ನಿಜ ಅಲ್ಲವೇ

ಜಲದೊಳಗಣ ಸಕಲ ಜೀವಿಗಳು ಬೆರೆತು ಬಾಳಿವೆ
ತಮ್ಮಾಹಾರದ ವಿನಾ ಪರಸ್ಪರ ಕೊಲ್ಲವು ಕಾಡಿ ನಿಜ ಅಲ್ಲವೇ

ಕಾಗೆಯೂ ಸಹಜ ಬಂಧುತ್ವ ಮೆರೆವುದು ಅಗುಳು ಕಂಡೊಡನೆ
ಸ್ವಾರ್ಥದಲಿ ಸಿಲುಕಿ ಮರೆತು ಮೆರೆಯದು ಕೂಗಾಡಿ  ನಿಜ ಅಲ್ಲವೇ 

ಕಾನನದಲಿ ಸ್ವಚ್ಛಂದ ಬದುಕುವವು ಮಿಗಗಳು ತಮ್ಮಷ್ಟಕ್ಕೆ
ಪರತನವ ತೋರದೇ ಬಾಳುವವು ಜೊತೆಯಾಡಿ ನಿಜ ಅಲ್ಲವೇ

ಮಾನವನೇಕೆ "ಸಿಡಿಲ"ನ ಮಧುರ ಮನವನವ ಕೆಡಿಸಿ
ಅರಿಯದೇ ನಿತ್ಯವೂ ಸಾಯುವ ಬಡಿದಾಡಿ ನಿಜ ಅಲ್ಲವೇ

*ವೈಲೇಶ ಪಿ ಯೆಸ್ ಕೊಡಗು*
*ಚಾಲಕರು ಕರಾರಸಾಸಂಸ್ಥೆ ಮಡಿಕೇರಿ*
*೧೪/೧/೨೦೧೮*

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು