ಜ್ಞಾನದ ಹಸಿವು
ಜ್ಞಾನದ ಹಸಿವು
~~~~~~~~
ಅರಿಯದೇ ಅಪ್ಪನ ಸಾವು
ಕಾಡಿತ್ತು ಕಡು ಬಡತನವು
ಅಮ್ಮನ ಮನದಿ ನೋವು
ಮಕ್ಕಳಿಗೆ ಆರದ ಹಸಿವು
ತನ್ನದಲ್ಲದ ತಪ್ಪಿಗೆ ಜೀವನ
ಹೋಳಾಗಿತ್ತು ವಿದ್ಯಾಮಾನ
ಗಳಿಸಿತು ಬರೀ ಅವಮಾನ
ಹುಟ್ಟಿದ ಊರು ತೊರೆದನ
ಉದರದ ಹಸಿವು ಸಾಕಷ್ಟು
ಜ್ಞಾನದ ಹಸಿವದು ಇನ್ನಷ್ಟು
ಬದುಕಲು ದಾರಿ ಬೇಕಷ್ಟು
ಮನಕೆ ಅರಿವ ಮಿತಿ ರವಷ್ಟು
ಅದೆಲ್ಲಿದ್ದೆಯೋ ಅನಾಮಿಕ
ಅರೆ ಇರದಿದ್ದರೇನು ಪುಸ್ತಕ
ತುಂಬುತಲಿರು ನೀ ಮಸ್ತಕ
ಎಂದು ಬದಲಿಸಿದ ಜಾತಕ
ಕಡೆಗಣಿಸದೇ ಆದ ಭಾವುಕ
ಓದಿದ ತೀರಿಸಲೆಂದು ತವಕ
ಮುಂದಿನ ವರ್ಷಗಳು ಕನಕ
ಇಂದಿಗಿದೋ ಬಾಳು ಸಾರ್ಥಕ
ವೈಲೇಶ ಪಿ ಯೆಸ್ ಕೊಡಗು
೨೭/೦೧/೨೦೧೮
Comments
Post a Comment