ಅಮಾನ್ಯ
ಅಮಾನ್ಯ
~~~~~
ಹತ್ತರ ಹರೆಯಕೆ ತಾಳಿ ಭಾಗ್ಯ
ಯಾರಂದರೋ ವರ ಯೋಗ್ಯ
ಅಂದಿಗೆ ಅದುವೇ ಸಾಮಾನ್ಯ
ಈಗ ಬಾಲ್ಯ ವಿವಾಹ ಅಮಾನ್ಯ
ಆಟವಾಡುವ ಮನಕೆ ಚೆಲ್ಲಾಟ
ಅರಳಿರದ ಸುಂದರ ಮೈಮಾಟ
ಹೆರಿಗೆಯ ನೋವದು ಅಕಟಕಟ
ಯಾರಿಗೂ ಬೇಡವೆಂಬ ಸಂಕಟ
ಬಾಳುವೆಯ ಅರಿವ ಮುನ್ನವೇ
ಇನಿಯನ ಶಾಶ್ವತ ಅಗಲುವಿಕೆ
ಸಾರಯುತ ಸಂಸಾರ ನೇಣಿಗೆ
ಬೋಳು ತಲೆ ಜೊತೆ ಮೂಲೆಗೆ
ನಿರಂತರ ವಿಧವೆ ಪಟ್ಟ ಬಾಳಿಗೆ
ತಾತ್ಸಾರವಾದೆ ತುತ್ತು ಕೂಳಿಗೆ
ಬಿಟ್ಟಿ ಜೀತದಾಳು ತವರು ಮನೆಗೆ
ಮುಕ್ತಿ ತೋರೋ ಶಿವನೇ ಬಾಳಿಗೆ
ವೈಲೇಶ ಪಿ ಯೆಸ್ ಕೊಡಗು
೨೮/೦೧/೨೦೧೮
Comments
Post a Comment