ನಾ ಮೆಚ್ಚಿದೆ
ನಾ ಮೆಚ್ಚಿದೆ
~~~~~~
ಒಡತಿ ನಿನ್ನಂದ ಚೆಂದ ಮನಸಿಗೊಪ್ಪಿದೆ
ನಾ ಮೆಚ್ಚಿದೆ. ನನ್ನೊಳಗೊಂದು ಹುಚ್ಚಿದೆ.
ಹೆಚ್ಚಿದ ಹುಚ್ಚಿಗೆ ಪ್ರೇಮದ ಹೆಸರ ಹಚ್ಚಿದೆ
ಅಭಿಪ್ರಾಯ ಅರಿಯದೇ ಅಭಿವ್ಯಕ್ತಿಸಿದೆ
ಅವಸರಿಸಿ ಅಪರಿಮಿತ ಅನಿಸಿಕೆ ಎನಿಸಿದೆ
ಅದೇನೊ ಕಂಡೊಡನೆ ಕರಪಿಡಿವ ಕನಸು
ಆತಂಕ ಅನಿಸದ ಅನನುಭವಿ ಸುಮನಸು
ಅನುಭವದ ಅವಸರಕೆ ನಿನ್ನೊಲವ ಬೆರೆಸು
ಅವರಿವರ ಗಮನ ಸುಮನಗಳ ಆಗಮನ
ನಿರ್ಗಮನದ ಅರಿವಿರದ ಆತುರ ಮೈ ಮನ
ಸಂತೆಯೊಳಗಿದ್ದು ಏಕಾಂತದನುಭವದಿ
ಮನದೊಳಗೆ ಮಂಡಿಗೆಯ ಮೆಲ್ಲುತ್ತದೀ
ಆತುರಗೇಡಿ ಮನ ತನ್ನತನವ ತೊರೆದು
ಮರೆತು ಮೈ ಮರೆತಂತಾಗಿದೆ. ಜೀವನದಿ
ನೀನಾಗಿ ಉಣಿಸಿ ತಣಿಸು ಬಲು ಮುದದಿ.
ಎಲೈ ಹುಚ್ಚು ಮನವೆ ಪೆಚ್ಚ ಪಡಿಯಚ್ಚು
ನೀನಾಗದೇ ಹೆಚ್ಚಾಗಿ ಅವಸರದ ಹುಚ್ಚು
ಮಚ್ಚಾಗಿ ಕೊಚ್ಚುವುದು ಮನದಾಸೆ ನೆಚ್ಚು
ನೀನೀಡುತಿರು ನೆಚ್ಚಿ ಪ್ರೀತಿ ಪ್ರೇಮದ ಅಚ್ಚು
ಮನದೊಡತಿಯ ಮನದಿ ಸುಭಾವನೆ ಹಂಚು
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೧೯/೧/೨೦೧೮
Comments
Post a Comment