ಉನ್ನತಿ

ಉನ್ನತಿ
~~~~
      
ಅವರಿವರ ನಿಂದಿಸುತ
ತನ್ನ ತಾ ನಿರ್ಬಂಧಿಸುತ
ತಾನೇ ಶ್ರೇಷ್ಠನೆಂಬಂತೆ
ಅರಿವು ಗೇಡಿಯಂದದಿ
ನರ್ತಿಸುವ ಕ್ರಿಮಿಗಳು

ಇವರೇ ದಲಿತರು ಧನದಿ,
ಉಚ್ಚ ಕುಲದಿ ಜನಸಿದರೂ
ಆಚಾರ ವಿದ್ಯೆ ಕಲಿತರೂ
ಜನರೊಳು ಬಲು ನೀಚರು
ಮರ್ಯಾದಾ ದರಿದ್ರರು 

ತಿನ್ನಲನ್ನವಿರದಿರೆ ಅನ್ಯರಿಗೆ
ಅಗುಳನ್ನಾದರೂ ನೀಡುವ
ಮನುಜ ಕುಲ‌ ನಾವೆಲ್ಲರೂ
ಎಂದು ಬಲ್ಲವರು ದೇವರು
ಸಾಮಾಜಿಕ ಐಸಿರಿ ಇವರು

ಉನ್ನತರು ಇವರು ಉನ್ನತರು
ಜನನದಿ ಬಲು ನೀಚರು
ಶಾಖಾಹಾರವ ಭಕ್ಷಿಸಿದರೂ
ಅವಿದ್ಯೆಯೇ ಇವರಗಿದ್ದರೂ
ಬದುಕಿನಲಿ ಬಲು ಶ್ರೇಷ್ಠರು

ವೈಲೇಶ ಪಿ ಯೆಸ್
೨೩/೦೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು