ಓ ಬಾನು ತೇಜ

ಸಂಕ್ರಾಂತಿ ಸ್ಪರ್ಧೆಗಾಗಿ

ಓ ಬಾನು ತೇಜ
~~~~~~~~
ಸಂಕ್ರಮಣ ತಿರುಗಿಸಿತೆ ಸೂರ್ಯದೇವನಾ
ಇಬ್ಬನಿ ಹನಿಯ ಕಣಕಣ ಕರಗಿ ಮೈಮನ
ಪುಳಕಗೊಳ್ಳುವ ರಸಕ್ಷಣಗಳ ಬಿತ್ತಿರುವನಾ
ಹಬ್ಬದೂಟಕೆ ಸೋತಿತು ಬಂಧುಗಳ ಮನ

ಎಳ್ಳು ಬೀರುವ ಮುನ್ನ ಗೋಮಾತೆಯ
ಪೂಜಿಸಿ ಹರುಷಗೊಂಡಿದೆ ಗೆಳೆತನ
ಕಾಲಕ್ಕೆ ತಕ್ಕಂತೆ ತಿನಿಸುಗಳ ಹೊಸತನ
ಮನಗಳ ಮಿಲನಕೆ ಮುರಿಬೇಕಿದೆ‌ ಮೌನ

ಸಂಕ್ರಾಂತಿ ಜೊತೆಗೆ ಕ್ರಾಂತಿಯ ನಡೆಸಲಿ
ಮಾನವರ ಮನದಿ ಶಾಂತಿಯ ತುಂಬಲಿ
ಪಶು ತೊಳೆವ ಕೈಯಲಿ ಮನೆ ಮನದಲಿ
ಕಲ್ಮಶಗಳನು ತೊಳೆದು ರಂಗವಲ್ಲಿ ಹಾಕಲಿ

ನಮ್ಮ ಮನಕೆ ಮುಸುಕಿದ ಮತ ಧರ್ಮದ
ಹೆಸರಲಿ ಹಬ್ಬಿದಾ ಮಬ್ಬಿನ ಕೊಬ್ಬು ಕರಗಲಿ
ಮಹಾನ್ ಗ್ರಂಥಗಳ ತಿರುಳಿನ ತರುಲತೆಯ
ಬುಡಕೆ ಶಾಂತಿಯ ಜಲಪ್ರೋಕ್ಷಣೆಯಾಗಲಿ

ನವಮನ್ವಂತರದೆಡಗೆ ಕೈಹಿಡಿದು ಸಾಗಿಸೆ
ದ್ವೇಷದ ದಿಕ್ಕನು ಪ್ರೀತಿಯೆಡೆ ತಿರುಗಿಸೆ
ಓ ಬಾನುತೇಜ ಜನರ ಮನವ ಬದಲಿಸೆ
ಜಗದ ಕಾರಣ ನೀನೇ ಮೊದಲ್ಗೊಳಿಸೆಯಾ

ವೈಲೇಶ ಪಿ ಯೆಸ್ ಕೊಡಗು
೨೫/೦೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು