ಡಂಭಾಚಾರ
ಕರುನಾಡ ಜನರ ಜೊತೆಗೆ ಹೊರನಾಡ ಕನ್ನಡಿಗರಿಗೆ ಹಾಗೂ ಅನಿವಾಸಿ ಭಾರತೀಯ ಕನ್ನಡಿಗರಿಗೂ ೬೯ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಡಂಭಾಚಾರ
~~~~~~~
ಸಕಲ ಬಿಲದೊಳು ಕಲಹ.
ಅಖಿಲ ಕುಲದೊಳು ದಲಿತ
ಮನ ಮನದೊಳು ಸ್ವಹಿತ
ಸರ್ವವು ನಮ್ಮೊಳಗೇ ನಿಶ್ಚಿತ
ಶೋಷಿಪರೆದುರು ಘೋಷಣೆ
ಎದುರು ಬಿದ್ದವರ ಆಪೋಷಣೆ
ಮಾನವೀಯತೆಯ ಪೋಷಣೆ
ಅಗತ್ಯವಿಹುದಿಂದು ವಿಶ್ಲೇಷಣೆ
ಬಗ್ಗಿ ಬಾಳುವ ನೆಪದ ಜೊತೆಗೆ
ತಗ್ಗು ತೋಡುವ ಮಿತ್ರ ಜನತೆ
ಅರಿವು ಬರುವ ಮುನ್ನ ಜಗದೆ
ಅದುಮುವರು ಮಣ್ಣಿನಡಿಗೆ
ಅಧಿಕಾರ ಜನರ ಅಂಧಾಕಾರ
ಅವನಿಯು ಇಲ್ಲಿ ದುಂಡಾಕಾರ
ಅಡಿಗಡಿಗೆ ಇಲ್ಲಿದೆ ಕಂದಾಚಾರ
ತೊರೆದು ಬದುಕು ಡಂಭಾಚಾರ
ವೈಲೇಶ ಪಿ ಯೆಸ್ ಕೊಡಗು
೨೪/೧/೨೦೧೮
Comments
Post a Comment