ಕಾಲದ ಕರೆ

ಕಾಲದ ಕರೆ
~~~~~~
ಕಾಲ ಕಾಲಕೂ ಕಾಲವ ತಡೆಯಲಹುದೆ?
ಕಾಲನ ಕರೆ ಬಂದಾಗ ಕಾಯಿ ಎನಬಹುದೆ?
ಸವೆಯುವ  ಮುನ್ನ ಸಮಯ ಸುಸಮಯ
ಕುಸಮಯ ಎನದೆ ಸಮಯಾವಕಾಶವನು
ಬಳಸಿ ಬೆಳಸಿ ಉತ್ತಮ ಬೆಳೆ ಬೆಳೆಯಬೇಕಿದೆ!

ಕಳೆದ ಕಾಲವದು ಮರಳಿ ಬಾರದು ಮತ್ತೆ
ಕೆಳಗಿಳಿದ ನೀರದು ಹೊರಳಿ ಮೇಲೇರೀತೆ?
ಅರಳಿದ ಹೂವು ಬಾಡುವ ಮುನ್ನ ಮುಡಿಗೆ
ಏರಿಸದೇ ಬಾಡಿದ ಹೂ ನೋಡಿ ಮರುಗದಂತೆ
ನಡೆ ನುಡಿಯು ಇರಬೇಕು ಗಡಿಯಾರದಂತೆ!

ವಿಜ್ಞಾನ ಸುಜ್ಞಾನ ಅದೆಷ್ಟು ಅರಳಿದರೇನು?
ಕಳೆದು ಹೋದುದು ಮತ್ತೆ ಮರಳುವುದೇನು?
ಮಾನ,ಪ್ರಾಣ, ಮಾನವ ಜನ್ಮ, ಏನಾದರೇನು?
ಒಮ್ಮೆ ಕಳೆದರೆ ಮತ್ತೆಂದೂ ಬಾರಲಾರದಿನ್ನು
ಹೊನ್ನಿನವಕಾಶವ ಕಳೆಯದೆಲೆ ನಾವಳಿದರೂ
ನಾಮವಳಿಯದಂತೆ ಬಳಸಿಕೊಳ್ಳಬಾರದೇನು!

ವೈಲೇಶ ಪಿ ಯೆಸ್ ಕೊಡಗು
೨೪/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು