ಗಝ಼ಲ್ - ೧೨

ಗಝ಼ಲ್ -೧೨
~~~~~~~
ಎಷ್ಟು ನದಿಗಳು ಹರಿದುಹೋದವು ನನ್ನ ನಿನ್ನ ನಡುವೆ
ಎಷ್ಟು  ಬಿಕ್ಕುಗಳು ಸುಳಿದುಹೋದವು ನನ್ನ ನಿನ್ನ  ನಡುವೆ

ಅದೆಷ್ಟು ಪ್ರೇಮ ಯುದ್ಧಗಳು ನಡೆದು ಬಂದವು ನನ್ನ ನಿನ್ನ ನಡುವೆ
ಮತ್ತೆಷ್ಟು ಮುತ್ತು ರತ್ನಗಳು ವಿನಿಮಯವಾದವು ನನ್ನ ನಿನ್ನ ನಡುವೆ

ಹೊಸತನದ ಹೊಸಿಲಲ್ಲಿ ಹಸನಾಗಿ ಬದುಕುವ ಸವಿಯ ಸವಿಯುತ
ಬದುಕ ಬಯಕೆಯ ರಸ ನಿಮಿಷಗಳು ನಲಿದವು ನನ್ನ ನಿನ್ನ ನಡುವೆ

ಬಾಳಿನ ಬವಣೆಗೆ ನುಡಿಯಲಾಗದ ಬಿರುನುಡಿಗೆ ಇನ್ನೆಷ್ಟು ಕಣ್ಣೀರ
ಹನಿಗಳು ನಮಗರಿಯದೇ ಉರುಳಿ ಹೋದವು ನನ್ನ ನಿನ್ನ ನಡುವೆ

ನಮ್ಮದೇ ಕುಡಿಗಳ ಉನ್ನತಿಗಾಗಿ  ಕಂಡ ಕನಸುಗಳ ನನಸಾಗಿಸಲರಿಯದೆ
ಕರಗಿ ನಿದಿರೆಯಿರದೆ ಎಷ್ಟೋ ದುಃಖ ಹಂಚಿಕೊಂಡೆವು ನನ್ನ ನಿನ್ನ ನಡುವೆ

ಸುಖದ ಸುಪತ್ತಿಗೆಯ ಸುಸಮಯದ ನಿಜ ಆರಂಭಕೆ ಸಿಹಿಯಾದ ವೇಳೆ
ಅರಸುತಲಿ ಅರಳಿದರೇನು ನಾವು ಒಂದೆಂಬ ಭಾವವು ನನ್ನ ನಿನ್ನ ನಡುವೆ

ಇಬ್ಬನಿಯ ಕಣಗಳು ಕರಗಿ ರವಿಕಿರಣ ಹೊರ ಹೊಮ್ಮಿ ಸಿಡಿಲನ ಮನ ಮನೆ
ಬೆಳಕಾಗುವ ಕನವರಿಕೆ ಅರಳಲು ಇಷ್ಟು ದಿನ ಬೇಕಾದವು ನನ್ನ ನಿನ್ನ ನಡುವೆ

ವೈಲೇಶ ಪಿ ಯೆಸ್ ಕೊಡಗು
೨೭/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು