ಗಝ಼ಲ್ : ೧೯
ಗಝ಼ಲ್ : ೧೯
~~~~~~~~
ಸಾದುವೇ ಕನ್ನಡತನದ ಹಿರಿಮೆ ಗರಿಮೆಗಳು ನಮಗಷ್ಟೇ ಮೀಸಲು
ಮರೆಯಬಹುದೇ ಹೊರ ರಾಜ್ಯದ ಕನ್ನಡಿಗರ ಮನದಾಳದ ಅಳಲು
ತನುವೊಂದು ರಾಜ್ಯದಲಿ ಸ್ಥಳೀಯ ಭಾಷೆ ಕಾದ ಸೀಸ ಕರ್ಣದೊಳು
ನಮ್ಮದೇ ಮಕ್ಕಳ ನಿತ್ಯ ನುಡಿ ಹೊಂದಿಕೊಳ್ಳದ ಮಾತೃಭಾಷೆ ಬೀಳಲು
ಬೆರೆಯದೇ ಅರಿಯದೇ ಓದಲಹುದೇ ಜಗದೊಳಗಡಗಿದ ಭಾಷೆಗಳು
ಅದೆಷ್ಟು ಭಾಷೆಯ ಕಲಿತರೇನು ಜ್ಞಾನದ ಅರಿವು ಬೇಕೆ ನಾವು ಅಳಲು
ಅರಸನು ತಾ ಹುಡುಕುತಾ ನಡೆದಿಹನು ಭಾಷಾ ತಜ್ಞರನು ಹಗಲಿರುಳು
ತಜ್ಞರೆಲ್ಲರು ಅವರಂತೆ ಅವರಿರಲಿ ಚತುರ ಮತಿ ಸಾಕು ರಾಜ್ಯ ಆಳಲು
ನಗ ಬೇಡ ನಗದು ಬೇಡ ನಗುಮೊಗವು ಅರಳಿರಲಿ ಕಮಲ ಪುಷ್ಪದಂತೆ
ನಗುನಗುತಾ ನಡೆಯಿರೆಲ್ಲರ ಜೊತೆ ಇನ್ನೇನು ಬೇಕಿಹುದು ಜಗದಿ ಬಾಳಲು
ನಡೆವಾಗ ಎಡವುವುದು ಸಹಜ ಎಡವಿದವರ ಕಂಡು ಕುಹಕ ನಗೆ ಸಲ್ಲ
"ಸಿಡಿಲು"ನು ನಗಲಾರನೆಂದಿಗೂ ಪರಿಹಾಸ್ಯಕ್ಕಾಗಿ ಅರಿತವರು ಬೀಳಲು
ವೈಲೇಶ ಪಿ ಯೆಸ್ ಕೊಡಗು
೨/೩/೨೦೧೮
Comments
Post a Comment