ಅಳಿಸದಿರಿ ಧರೆ
ಅಳಿಸದಿರಿ ಧರೆ
~~~~~~~~
ಭೂಗೋಲದ ಸುತ್ತಲೂ ನೀರು
ಜಗದೊಳಗ ಜೀವಕಿದು ಬೇರು
ಭೂಮಿಗಿಂತಲೂ ಪಾಲು ಮೂರು
ನೀರಿಲ್ಲದೇ ಬದುಕುವವರು ಯಾರು?
ಆಹಾರದ ಬೆಳೆಯನು ಬೆಳೆಯಲು
ಬೆಳೆದ ಬೆಳೆಗಳನು ಬೇಯಿಸಲು
ಬೇಯಿಸಿದ ಆಹಾರವ ಸೇವಿಸಲು
ಬೇಕು ನೀರು ದಾಹವನು ತಣಿಸಲು
ನೀರಿದ್ದರೆ ನಾವು ಇಲ್ಲದೇ ಹೋದರೆ
ಬರಿಯ ಕಾವು ನೀರಿಲ್ಲದಿರೆ ತೊಂದರೆ
ಇದನರಿತು ಹಿತಮಿತದಿಂದ ಬಳಸಿದರೆ
ಅಳಿಯದೇ ಉಳಿಯುವುದು ಈ ಧರೆ
ವೈಲೇಶ ಪಿ ಯೆಸ್ ಕೊಡಗು
೨೪/೧/೨೦೧೮
Comments
Post a Comment