ಮನದಾಳದ ಮಾತು ೦೯

ಮನದಾಳದ ಮಾತು ಭಾಗ 09
==========================

ನನ್ನ ಗೀತೆ ನನ್ನವರ ಗಾಯನ ತಂಡದ ಮತ್ತೋರ್ವ ಗೀತಾ ರಚನಾಕಾರರು ಸುರಭಿಲತ ಇವರ ಪರಿಚಯ ಇವರ ಮಾತಿನಲ್ಲಿಯೇ  ಕೇಳಿ

ನನ್ನ  ಕಾವ್ಯನಾಮ ಸುರಭಿ ಲತ.ನಾನು ಸಾಹಿತ್ಯಾಸಕ್ತೆ
ಸುಮಾರು ಎರಡು ವರ್ಷಗಳಗೂ ಅಧಿಕ ಸಮಯದಿಂದ  ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅಂಕಣದಲ್ಲಿ ಕವಿತೆಗಳನ್ನು, ಸಣ್ಣ ಕಥೆಗಳನ್ನು ಮತ್ತು ಪ್ರಹಸನಗಳನ್ನು ಬರೆಯುತ್ತಿದ್ದೇನೆ.

ನನ್ನ ಕವಿತೆಗಳು ಕರ್ನಾಟಕದ  ದಿನ ಪತ್ರಿಕೆಗಳಲ್ಲಿ ಮತ್ತು  ಕೆಲವು ವಾರ ಪತ್ರಿಕೆಗಳಲ್ಲಿ ಕೂಡ ಪ್ರಕಟಗೊಂಡಿವೆ. ಇತ್ತೀಚಿಗೆ ನನ್ನ ಒಂದು ಕವಿತೆ ಹಾಡಾಗಿ ಪರಿವರ್ತನೆಗೊಂಡು ಒಂದು CD ಯ ರೂಪದಲ್ಲಿ
ಹೊರಬಂದಿದೆ.ಕವಿಗೋಷ್ಠಿಯಲ್ಲಿ ನನ್ನ ಕವಿತೆಗಳನ್ನು ಓದಿ ಅನಂದಪಟ್ಟಿದ್ದೇನೆ.

ನನಗೆ ಸಾವಿರಕ್ಕೂ ಮೀರಿ ಸಾಮಾಜಿಕ ತಾಣದಲ್ಲಿ ಕಾವ್ಯ ಪ್ರಿಯರಿದ್ದಾರೆ. ಪ್ರೀತಿ, ಪ್ರೇಮ ಮತ್ತು ಇಂದಿನ ಸಾಮಾಜ ನನ್ನ ಕವಿತಾ ವಸ್ತು.
ಉತ್ತಮ ಕವಿತೆಗಳನ್ನು ಸಹೃದಯ ಕಾವ್ಯ ಪ್ರಿಯರಿಗೆ ಕೊಡಬೇಕೆಂಬುದು ನನ್ನ ಆಶಯ.

ಮುಗೀತಲ್ಲ ಈಗ ಇವರ ಕವಿತೆಯನ್ನು ಬಗ್ಗೆ ಎರಡು ಮಾತು

ಅನುರಾಗ ಹೊಳೆಯ  ಹರಿಸಿ
ನಲಿದೆ ಮನವ ತಣಿಸಿ

(ಸುಧೆಯೋಪಾದಿಯಲ್ಲಿ ಪ್ರೀತಿಯುಣಿಸಿ ನನ್ನ ಮನವಿ ತಣಿಸಿ ನೀನೂ ಸಂತಸ ಹೊಂದಿದೆ ಎಂಬ ಭಾವ)

ಒಡಲೊಳಗೆ ಮಿಂಚೊಂದು ಹರಿದು ಹಿತವಾದ ಮಾಧುರ್ಯದಿ ಕರೆದು
ತೀರದ ಮೋಹದಿ ಸೆಳೆದೆ
ಮನದ ಕತ್ತಲೆ ನೀ ಕಳೆದೆ
(ಪ್ರತಿಯೊಬ್ಬರ ದೇಹದೊಳಗೆ ಮಿಂಚು ಸಂಚು ಎಲ್ಲಾ ಇದ್ದಿದ್ದೇ ಆದರೆ ಹೇಳಿಕೊಳ್ಳುವವರು ಕಡಿಮೆ ಮುಚ್ಚು ಮರೆಯಿಲ್ಲದ ಮನಸ್ಸು )

ತಂಗಾಳಿಯಾಗಿ ತೇಲಿ ಬಂದೆ  ನನ್ನಲಿ
ಪರಿಮಳವಾಗಿ ಸೇರ ಬಂದೆ ನಿನ್ನಲಿ
ದೇಹವೆರಡು ಆತ್ಮ ಒಂದಾಯಿತು
ತನುಮನಗಳು ದೇಹವೆರಡು ಆತ್ಮದಿ ಬೆರೆತು  (ಎಂಥಹ ಅದ್ಭುತ ಭಾವನೆಗಳು ಶರಣು ಶರಣಾರ್ಥಿಗಳು )

ನನ್ನದೆಯ ಮಂಧಾರ ಹೂವು
ನಿನ್ನೊಲವಿನಲಿ ಮರೆತೆ ನೋವು 
ನಿನಾದೆ ಬಾಳಿಗೆ ಬೆಳಗು
ನನ್ನೊಲವಲಿ ಚುಕ್ಕಿಯಾಗಿ ಮಿನುಗು

(ಇದು ಸತಿಗೆ ಪತಿಯಾಗಲಿ ಪತಿಗೆ ಸತಿಯಾಗಲಿ ಆಡಬಹುದಾದ ಸಂಭಾಷಣೆಯ ಸಾರ ಪ್ರೇಮಿಗಳ ರಸದೌತಣ ಅಲ್ಲವೇ)

ಕಣ್ಣ ಸನ್ನೆಯಲಿ ಕರೆದು
ಎದೆಯ ವೀಣೆಯ ಮಿಡಿದು

ಇಲ್ಲಿ ನಾನು ಹೇಳುವಂಥದ್ದು ಏನೂ ಇಲ್ಲ ಬಹು ಸರಳವಾದ ಸುಂದರವಾದ ಭಾಷೆಯಲ್ಲಿ  ಎಲ್ಲರಿಗೂ ಅರ್ಥವಾಗುವ ಹಾಗೆ ಎಲ್ಲರೂ ಈ ಕೂಸು ನನ್ನದೆಂದು ಅಪ್ಪಿಕೊಳ್ಳುವ ಹಾಗೆ ಮುದ್ದಾಗಿ ಬರೆದಿದ್ದಾರೆ. 

ಇವರ ಬಗ್ಗೆ ನನ್ನ ಮನದ ಭಾವನೆಗಳು ಹೇಗೆಂದರೆ ಸುಮಾರು ಎರಡು ವರ್ಷಗಳಗೂ ಅಧಿಕ ಸಮಯದಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಪ್ರತ್ಯಕ್ಷ ಕಂಡು ಮಾತನಾಡುವ ಹಂಬಲ.
ನನ್ನ ಗೀತೆ ನನ್ನವರ ಗಾಯನ ತಂಡದಲ್ಲಿ ಇವರ ಆಯ್ಕೆ ನನಗೆ ಅತೀವ ಹರುಷ ತಂದಿತು. ಈ ಬಗ್ಗೆ ಸಂಚಾಲಕರಾದ ಪ್ರಕಾಶ್ ಅಂಬರಕರಲ್ಲಿ ವಿಚಾರಿಸಲು  ಆ ದಿನ ಏನಂದರೋ ಜ್ಞಾಪಕಕ್ಕೆ ಬರುತ್ತಿಲ್ಲ.  ಈಗಲಾದರೂ ಇವರ ಆಯ್ಕೆಯ ಮರ್ಮ ತಿಳಿಸುವರೇನೋ ನೋಡೋಣ. 

ಇವರನ್ನು ಕೂಡ ನನ್ನ ಗೀತೆ ನನ್ನವರ ಗಾಯನದ ಧ್ವನಿಸುರುಳಿಯ ಬಿಡುಗಡೆ ಸಮಾರಂಭದಂದು ರೋಟರಿ ಕ್ಲಬ್ ಚಿಮಣಿ ಹಿಲ್ ಸಾರಥಿಗಳಾದ ಶಶಿಕಾಂತರಾವ್ ಬೊಮ್ಮಣ್ಣರು ಆಡಳಿತ ಮಂಡಳಿ  ಗೌರವಪೂರ್ವಕವಾಗಿ ಸನ್ಮಾನಿಸಿದರು. ಇದಕ್ಕೆಲ್ಲ ಅವಕಾಶ ನೀಡಿದ ಸನ್ಮಾನ್ಯ ಶ್ರೀಯುತ  ಪ್ರಕಾಶ್ ಅಂಬರಕರ್  ಹಾಗೂ ಶಶಿಕಾಂತರಾವ್, ಬೊಮ್ಮಣ್ಣರು, ದೇಶಪಾಂಡೆ ಎಂ ಜಿ ಸರ್, ಸಿದ್ದರಾಮ ಹೊನ್ಕಲ್ ಸರ್, ಅಲ್ಲದೆ ತಂಡದ ಏಳ್ಗೇಗೆ ಸಹಕಾರಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಅಪಾರ ಜನಸ್ತೋಮದಲ್ಲಿ ಮನಸ್ಸಿಗೆ ಹತ್ತಿರವಾದರು ಅನೇಕರು ಇದ್ದರು ಅವರಲ್ಲಿ ಕೆಲವರು  HC Umesh BC Nagendra ಇವರ ಹಾಗೆ ತುಂಬಾ ಜನ ಇದ್ದರು ನೆನೆಸಿಕೊಂಡಾಗ ಛೆ! ಅನಿಸುತ್ತದೆ ಕಾರಣ ಅವರ ಜೊತೆ ಒಂದೇ ಒಂದು ಫೋಟೊ ಕೂಡ ತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲವೇ ಎಂದು  ಆದರೆ ಎಲ್ಲರೂ ಮನಸ್ಸಿನ ಪುಟದಲ್ಲಿ ಭದ್ರವಾಗಿ ಕುಳಿತಿದ್ದಾರೆ.

ತಮ್ಮವ

ವೈಲೇಶ ಪಿ ಯೆಸ್
ವಿರಾಜಪೇಟೆ ತಾಲೂಕು
ಕೊಡಗು ಜಿಲ್ಲೆ
21/1/2017

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು