ನಾನೇ

ನಾನೇ
~~~
ನನ್ನ ನಾ ಹುಡುಕುತ್ತಾ ಹೊರಟ
ನನಗೆ ದೊರಕಿದ ನಾನು ಒರಟ!
ಅದನ್ನಳಿಸಲು ಬೇಕು ಹೋರಾಟ
ಅದರಿಂದಲೇ ಬಾಳು ಮೇಲಾಟ!

ಮೇಲಾಟದ ಕೋಲಾಟದಿ ನಾನು
ಯಾರು? ಮೇಲೆ ಬಿದ್ದವನೋ? ಅಲ್ಲಾ 
ಮೇಲೆ ಬೀಳಿಸಿ ಕೊಂಡವನೋ? ಇಲ್ಲಾ
ನೋಡುಗನೋ? ಅರಿಯದಾಯಿತು ಮನ.

ಅವರಿವರ ಹೋಲಿಸಿ ನನ್ನನ್ನು ಸೇರಿಸಿ
ಅಪಸವ್ಯವೆನಿಸಿ ಅಪಹಾಸ್ಯವೆನಿಸಿತು!
ಅವರವರೇ ನಾನು ನಾನೇ ನನಗೇಕೆ
ಈ ವರಸೆ ಆಸೆ ಮೂಡಿತೆನಗೆ ಜಿಜ್ಞಾಸೆ!

ನನ್ನೊಳಗ ನಾನೆಂದಿತು ನೀನು ನೀನೇ
ನಿನಗೆ ಸರಿ ಸಮಾನನು ನೀನೇ ತಾನೇ
ಅವರವರ ಪಾತ್ರ ಅವರದೇ ಆಗಿರಲಿ
ಹೋಲಿಸಿ ಸೋಲುವೆಯೇಕೆ ನೆನಪಿರಲಿ

ದೋಷದ ದೂಷಣೆಯ ದೂರವಿರಿಸಿ
ಧೋರಣೆ ಬವಣೆಯನು ಬದಿಗಿರಿಸಿ
ನಾನೆಂಬ ಅಹಮಿಕೆಯ ಆಚೆಗಿರಿಸಿ
ಭೇದ ಭಾವವನು ಬೇಲಿಯಾಚೆ ಸರಿಸಿ

ತನ್ನತನವ ತೊರೆಯದೇ ಅನ್ಯರೊಳು 
ಬೆರೆತು ಬೆಳೆಯದ ಹೊರತು ಈರೇಳು
ಲೋಕದೊಳು ನೀನ್ಯಾರೆಂದು ಹೇಳು
ಈ ಜಗದೊಳು ನಾನೇ ಎಂಬುದು ಬರೀ ಓಳು

ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೧೮/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು