ನಿನಗೆ ವಂದನೆ

ನಿನಗೆ ವಂದನೆ
~~~~~~~~
ಹಗಲಿರುಳ ದಣಿವರಿಯದ ದಿನಕರಗೆ
ಕರಮುಗಿದು ನಮಿಸುವೆ ಬಲವ ನೀಡೆಮಗೆ
ಅನುದಿನವು ಮೌನಾಗಮನ ಮೆರವಣಿಗೆ 
ಬಣ್ಣದೋಕುಳಿಯ ಬಳಿದಿಹೆ ಕಡಲು ನದಿಗೆ

ಎಳೆವೆಯ ಹೊಳೆವಿಗೆ ಕಾದಿಹುದು ಇಳೆ
ಜೋಳಿಗೆಯ ತುಂಬಲು ನೀ ನೀಡು ಕಳೆ
ಜಗವು ಬೆಳಗಲಿ ನಿನ್ನಿಂದ ಬೆಳೆಯಲಿ ಬೆಳೆ
ಬೇಡುತಲಿ ನಿಂತಿಹೆನು ನಡು ನೀರಿನ ಹೊಳೆ

ನಿನ್ನಿಂದ ಎಗರಿದ ತುಣುಕು ಈ ಧರಣಿ
ನಿನ್ನೊಲವಿಗೆ ದಿನದಿನವೂ ನವ ತರುಣಿ
ಮೂಡಣದಿ ಉದಿಸಿ ಬಾರಯ್ಯ ದಿನಮಣಿ
ನಿನ್ನಿಂದಲೇ ನಮ್ಮುಳಿವು ನಾವೆಂದಿಗೂ ಋಣಿ/

ಅದೆಷ್ಟು ದಣಿದರೂ ದುಡಿಮೆಗೆ ಚಕಾರವಿಲ್ಲ
ಹೃದಯದಿ ಮಮಕಾರವೇ ತುಂಬಿದೆಯಲ್ಲ
ನಿನ್ನಯ ದುಡಿಮೆಗೆ ಸರಿ ಸಾಟಿ ಕಾಣೆನಲ್ಲ
ಅದಕೆ ಸಂಧ್ಯಾವಂದನೆ ಮಾಡುವೆವು ನಾವೆಲ್ಲ

ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೧೬/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು