ಸಹನಾ ಮೂರುತಿ ನೀನಮ್ಮ

ಸಹನಾ ಮೂರುತಿ ನೀನಮ್ಮ
~~~~~~~~~~~~~~~
ಅದೇನು ಸಹನೆ ಅಡಗಿದೆ ನನ್ನಮ್ಮ
ನಿನ್ನೊಳು. ಅದೆಲ್ಲಿ‌ಂದ ತಂದಿಹೇ ನೀನಮ್ಮ.
ತಾ ನನ್ನೊಳು ಅದರಲಿ ಶತಕೋಟಿಯಲೊಂದು
ಪಾಲು.ತಾಳು ಅದೋ ನೋಡು ನಿನ್ನೊಡಲು
ಹರಿವವರ ಗೋಳು. ನೀಡುವೆ ಅವರಿಗೂ ಬಾಳು

ಮೃದು ಅಧರವ ಅಗೆದಗೆದು  ಅಗುಳುಗಳ 
ಹೊಸೆಯುವ ಉದರ ನಿಮಿತ್ತ ಕನಸುಗಳ
ಬಿತ್ತಿಹರು. ನಿನ್ನದೇ ಮಕ್ಕಳು ನಿನ್ನಧರ ಕೆತ್ತಿ
ಬಿತ್ತಿದರೆ ಕೋಪವಿಲ್ಲ ನಿನಗೆ. ಕೆಲವೇ ಬಿತ್ತಿ
ಹಲವು ಪಡೆಯೆ ಬಿಡುವೆ ನಿನಗಿಲ್ಲ ಅಸಹನೆ.

ನಮ್ಮಯ ಕೆಟ್ಟ ದೌರ್ಜನ್ಯಕೆ ಸಿಲುಕಿ ಅಳಿದಿದೆ.
ಮೇಲ್ಮೈಯ ಸಕಲ ಸವಿ ರುಚಿಯು ಕಳೆದಿದೆ.
ಭಯದಿಂದ ಜಲವು ಪಾತಾಳದಿ ನಡುಗುತಿದೆ.
ನರಮಾನವ ನಿನ್ನೊಡಲ ಜರಡಿ ಮಾಡುತಿರೆ
ಅಮೃತ ಅಳಿದು ವಿಷವೇ ಉಕ್ಕುಕ್ಕಿ ಬರುತಿದೆ.

ಸಮಾನತೆಯ ಕಲಿಯಬೇಕಿದೆ ನೋಡಿ ನಿಮ್ಮ ನಾವು.
ಅರಸನಾದರು ತಿರುಕನಾದರು ಒಂದೇ ನಮ್ಮ ಸಾವು.
ಅವನಿಗೂ ಇವನಿಗೂ ಆರಡಿ ಮೂರಡಿ ಮೀಸಲು
ಹುಟ್ಟು ಸಾವಿಗೂ ಮಣ್ಣೇ ಸಾಕು ಹೊದ್ದು ಮಲಗಲು
ಸುಟ್ಟರೂ ಮಣ್ಣೊಳಗಿಟ್ಟರೂ ಗೊಬ್ಬರ ಮತ್ತಿಣುಕಲು

ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೧೬/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು