ಗಜ಼ಲ್ ೧೧
ಗಜ಼ಲ್ ೧೧
~~~~~~~
ಹಾರಾಡಿದವು ಬಾನಾಡಿ ಬಾಳಿದವು ಜೊತೆಗೂಡಿ ನಿಜ ಅಲ್ಲವೇ
ಹಾರಾಡುವ ಮಾನವ ಭಾವನೆಗಳ ಬೇರೆ ಮಾಡಿ ನಿಜ ಅಲ್ಲವೇ
ಜಲದೊಳಗಣ ಸಕಲ ಜೀವಿಗಳು ಬೆರೆತು ಬಾಳಿವೆ
ತನ್ನಾಹಾರಹದ ವಿನಹ ಪರಸ್ಪರ ಕೊಲ್ಲವು ಓಡ್ಸಾಡಿ ನಿಜ ಅಲ್ಲವೇ
ಕಾಕರಾಜನು ಸಹಜ ಬಂಧುತ್ವ ಮೆರೆವನೇ ಪರಂತು
ಸ್ವಾರ್ಥದಲಿ ಸಿಲುಕಿ ಮರೆತು ಮೆರೆಯನು ಕೂಗಾಡಿ ನಿಜ ಅಲ್ಲವೇ
ಕಾನನದಲಿ ಸ್ವಚ್ಛಂದ ಬದುಕಿನ ಮಿಗಗಳು ತನ್ನಂತೆ
ಪರರೆಂದು ನೆನೆಯುತ ಬಾಳುವವು ಜೊತೆಯಾಡಿ ನಿಜ ಅಲ್ಲವೇ
ನರಮಾನವನೇಕೆ "ಸಿಡಿಲ"ನ ಸಿಹಿಯ ಮನವನವ
ಅರಿಯದೇ ನಿತ್ಯ ಜೀವನದಲಿ ಸಾಯುವ ಬಡಿದಾಡಿ ನಿಜ ಅಲ್ಲವೇ
ವೈಲೇಶ ಪಿ ಯೆಸ್
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೧೪/೧/೨೦೧೮
Comments
Post a Comment