ಮತ-ಧರ್ಮ-ಮತಿ

ಮತ-ಧರ್ಮ-ಮತಿ
~~~~~~~~~~
ಕಾಲ ಎಳೆಯುವುದುದೆಲ್ಲರ ಕಾಲ.
ನೂರ್ಕಾಲ ಬಾಳುವೆನೆಂದವರ ತಾ
ಬಿಡಲಿಲ್ಲವೀ ಕಾಲ. ಎಡಬಿಡದೆ ನಡೆಯಲು
ಬೇಕು, ಸುಮ್ಮಗೆ ನಡೀಬೇಕು ಕರೆದಾಗ ಕಾಲ.
ಬಿಚ್ಚುವಂತಿಲ್ಲ ಅವನೆದುರು ನಮ್ಮ ಬಾಲ.

ಅದೇನೂ ಅರಿಯದೆ ತಿಳಿದಿಹೆವು ಸುಮ್ಮನೆ.
ಇದು ನಮ್ಮ ಮನೆ,ಅಬ್ಬರಿಸಿ ಬಿರಿದಿಹೆವು ಘಮ್ಮನೆ.
ಮತೀಯ ಧಾರ್ಮಿಕ ಸೈದ್ದಾಂತಿಕ ಬೊಬ್ಬಿರಿವ
ಅಬ್ಬರದ ಅರಿವದು ಅಡರುವ ಮುನ್ನ ಪಕ್ಕನೆ
ನೆತ್ತರ ಇತ್ತವರು ಯಾರೆಂದು ತಿಳಿಯದೇ ನೀನೇ

ನಿನ್ನವರ ಪಾಲಿಗೆ ಮಕ್ಕಳ ಬಾಳ್ವೆಗೆ ಕೊಳ್ಳಿಯಿಟ್ಟೆ.
ಹೆತ್ತವರ ಮಡಲಿಗೆ ಮುಂದಿನ ನಡೆಗೆ ಏನು ಕೊಟ್ಟೆ
ನಿನ್ನನ್ನೇ ನಂಬಿದವರ ದೌರ್ಜನ್ಯ ನಡೆಸಲು ಬಿಟ್ಟೆ
ನೀನೇ ಇಲ್ಲದ ಮೇಲೆ ಮತ ಧರ್ಮ ಲೊಳಲೊಟ್ಟೆ
ಅನ್ಯಾಯದ ಮರಣಕೆ ಅರಿಯದೇ ಹೆಜ್ಜೆಯನ್ನಿಟ್ಟೆ

ಮತ ಧರ್ಮಗಳು ಮರಣದವರೆಗೆ ಬಳಿಕ ಏನು?
ಶೋಷಣೆ ಘೋಷಣೆ ನಿನ್ನವರ ಕಾಯುವುದೇನು?
ಯಾರಿದ್ದರೇನು ಮನೆಗೆ ಬಷೀರ್  ಬರುವನೇನು?
ನಂದಾದೀಪವಾಗಬೇಕಿದ್ದ ದೀಪಕ್ ಇರುವನೇನು?
ಇಬ್ಬರ ಸಂಸಾರದ ನೋವುಗಳು ಒಂದೇ ಅಲ್ಲವೇನು? 

ಅವರವರ ಮತ ಧರ್ಮದ ಹಕ್ಕುಗಳು ಅವರಿಗಿರಲಿ
ಮನುಜ ಕುಲವದು ಒಂದೇ ಎಂಬುದು ಅರಿವಿರಲಿ
ಪ್ರಕೃತಿಯ ನಡೆಯಲ್ಲಿ ಕಾಲಕಾಲಗಳು  ಏನೇ ಇರಲಿ
ತಾಯಿಯ ಮಡಿಲಲ್ಲಿ ಮಕ್ಕಳೆಲ್ಲಾ ಒಂದೇ ತಿಳಿವಿರಲಿ
ನಾನು ನೀನು ಮರೆತು ಮನ ಮನ ಬೆರೆತ ಬದುಕಿರಲಿ


ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೧೫/೧/೨೦೧೮



Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು