ಮನದಾಳದ ಮಾತು ಭಾಗ 6

ಮನದಾಳದ ಮಾತು ಭಾಗ 6
=====================

ಮೊದಲಿಗೆ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದು ದೊಡ್ಡ ಮಟ್ಟದ ಯಶಸ್ಸು ತಂದಿತ್ತ ಗೆಳೆಯರಾದಿಯಾಗಿ ತಂತ್ರಾಂಶ ತಂತ್ರಜ್ಞಾನ ಗಾಯನಜ್ಞಾನ ತಾಳ ಹಿಮ್ಮೇಳಗಳ ಸಮ್ಮಿಲನ ಪ್ರವೀಣರೆಲ್ಲಾರಿಗೂ ವಂದನೆಗಳು.

ಗಾಳಿ ನೀರು ಬೆಳಕು ಕೊಟ್ಟ ಚಿಮಣಿ ಹಿಲ್ ರೋಟರಿ ಸಂಸ್ಥೆಗೂ ವಂದನೆಗಳು. ಸಂಚಾಲಕರಾದ ಕನಸುಗಾರರಿಗೂ ದಾತೃಗಳಾದವರಿಗೂ ಮಹಾಪೋಷಕರಾದವರಿಗೂ ಮಧ್ಯಪ್ರದೇಶ ಭರ್ತಿ ಮಾಡಿಸಿದವರಿಗೂ ಸಾರು ಸೂರು ನೀರು ಕಲ್ಪಿಸಿದ ಬೇರುಗಳಿಗೂ ಕೋಟಿ ವಂದನೆಗಳು.

ಮಿತ್ರಾತ್ಮೀಯರೆ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರೂ  ಫೇಸ್ಬುಕ್ಕ್ ಮಿತ್ರರಲ್ಲ ಅನ್ನೊದಕ್ಕೆ ಇನ್ನೊಂದು ಸಾಕ್ಷಿಯಾಗಿ ವೇದಾವತಿ ಇದ್ದಾರೆ ಅಪಾರ ಬುದ್ಧಿಮತ್ತೆಯ ಗೃಹಿಣಿ  ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತೊರೆಶೆಟ್ಟಿಹಳ್ಳಿಯ ತಿಮ್ಮೇಗೌಡರ ಧರ್ಮಪತ್ನಿ. ಹಳ್ಳಿಯಲ್ಲಿದ್ದರೂ ಬಿಸಿನೆಸ್ ಮಾಡುತ್ತಿರುವ ತಿಮ್ಮೇಗೌಡರೆ ಪ್ರೋತ್ಸಾಹಧಾಯಕರು.

ಈಗ ಇವರ ಕವನದ ಕಡೆ ಗಮನ

ಶರಣು ಶರಣು ಶರಣು ಶರಣೆಂಬೆನು ನಾನು
ಭಾರತ ಜನನಿಗು ತನುಜಾತೆಗೂ ಶರಣು ಶರಣು ಶರಣು ( ಭಾರತಾಂಬೆಗೆ ಮಾತ್ರವಲ್ಲ ತನುಜಾತೆ ಕರುನಾಡಿಗೂ ವಂದಿಸುವ ಪರಿ ಜೀವನ ಅನನ್ಯ )

ತುತ್ತಿನ ಚೀಲ ತುಂಬೋ ನೇಗಿಲ ಯೋಗಿಗೆ ಶರಣು
ಮೋಡವ ನಂಬಿ ಬದುಕಿರುವ ಧೀ ಶಕ್ತಿಗೆ ಶರಣು
ಧೀರ ಪಥದಿ ಮುನ್ನಡೆವ ವೀರಯೋಧಗೆ ಶರಣು
ಕಾಲನ ಜೊತೆ ಕಾಲನಿಡುವ ಅಜೇಯನಿಗೆ ಶರಣು

(ರೈತ ನೇಗಿಲ ಯೋಗಿ ಸಾಮಾನ್ಯ ಚಿಂತನ.ಮೋಡದಾಶ್ರಯವನ್ನು ನಂಬಿ ಬೆಳೆ ಬೆಳೆದು ತುತ್ತಿನ ಚೀಲ ತುಂಬೋ ನೇಗಿಲ ಯೋಗಿಗೆ  ಅಬ್ಬಾ ಪದಗಳೆ ನಿಜಕ್ಕೂ ಅಜೇಯ ದೀರರೆ ನಮ್ಮ ಯೋದರು ಸರಿಯಾದ ಭಾವನೆಗಳು )

ಅಕ್ಷರಗಳ ಚಿತ್ತಕೆ ಬಿತ್ತಿದ ಶಿಕ್ಷಕರಿಗೆ ಶರಣು 
ಕಾಯಕದಲಿ ಸುಖವನು ಕಂಡ ಕಾರ್ಮಿಕರಿಗೆ ಶರಣು
ಕೋಟಿ ಕೆಲಸಗಳ ಸೃಷ್ಟಿಸಿದಾ ಉಧ್ಯಮಿಗೆ ಶರಣು  ಕೋಟಿ ಕನಸುಗಳ ಬದುಕಿಸಿದ ವೈದ್ಯ ದೇವಗೆ ಶರಣು

(ರೈತಮಗಳ ಆಲೋಚನೆ ನೋಡಿ ಅಕ್ಷರಗಳ ಬಿತ್ತುವ ಗುರುಗಳಿಗೆ ಕಾಯಕದ ಕಾರ್ಮಿಕರ ಉಧ್ಯಮಿಗೆ ಇವರೆಲ್ಲರಿಗೂ ಆರೋಗ್ಯ ಭಾಗ್ಯ ಕರುಣಿಸಿ ದೇಶದ ರಕ್ಷಣೆಗೆ ಭಾಗಿಯಾದ ವೈದ್ಯ ದೇವನೆ ಅಲ್ಲವೇ)

ನಂಜನು ನುಂಗಿ ಬದುಕನು ಹೆಣೆದ ಜನ್ಮಧಾತನಿಗೆ ಶರಣು
ಎದೆಯ ಹಾಲನೆರೆದ ತಾಯಿ ಸನಾತೆಗೂ ಶರಣು
ಅಭಿವ್ಯಕ್ತಿಯ ಅವಕಾಶದ ಪ್ರಜಾಪ್ರಭುತ್ವಕೆ ಶರಣು
ಭಾರತದಿ ಮತ್ತೆ ಜನಿಸುವ ಮಹಾದಾಸೆಗೆ ಶರಣು

( ಹೌದು ಇಂದು ನಮಪ್ಪ ವರದಕ್ಷಿಣೆ ಸರಿಯಾಗಿ ಕೊಡಲಿಲ್ಲ ಇನ್ನೂ ಒಳ್ಳೆಯ ಕಡೆ ಮದುವೆ ಮಾಡಿಲ್ಲ ಎನ್ನುವವರ ಮಧ್ಯೆ ಅಪ್ಪ ಅಮ್ಮನಿಗೆ ಮನಃಪೂರ್ವಕ ವಂದಿಸುತ್ತಾ ಸ್ವತಂತ್ರ ಭಾರತದಲ್ಲಿ ಮತ್ತೆ ಜನಿಸುವ ಬಯಕೆಗೆ ಧನ್ಯವಾದಗಳು )

ಇಂತಹ ಅದ್ಭುತ ಕವಯತ್ರಿಯರನ್ನು ದಿನಾಂಕ 29/12 /2016 ರಂದು ರಾಹುಲ್ ದ್ರಾವಿಡ್ ಕ್ರೀಡಾಬಳಗ, ಅನನ್ಯ ಹಾರ್ಟ ಫೌಂಡೇಶನ್, ಪ್ರಜಾಶಕ್ತಿ ಟ್ರಸ್ಟ್ ವತಿಯಿಂದ ಜರುಗಿದ ಕುವೆಂಪು ಜನ್ಮದಿನಾಚರಣೆ ಸಮಾರಂಭವು ಮದ್ದೂರು ತಾಲೂಕು ಕೌಡ್ಲೆ ಗ್ರಾಮದಲ್ಲಿ ಜರುಗಿದ ಸಂದರ್ಭದಲ್ಲಿ  ಶ್ರೀಮತಿ ಎನ್ ಪಿ ವೇದಾವತಿಯವರನ್ನು ಸನ್ಮಾನಿಸಲಾಯಿತು.

ಇರಲಿ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದಲ್ಲಿ ಎಲೆಮರೆಯ ಕಾಯಿಯನ್ನು ಬೆಳಕಿಗೆ ತಂದ ಪ್ರಕಾಶ್ ಅಂಬರಕರರಿಗೆ ಈ ಕಾರ್ಯಕ್ರಮ ಸರಾಗವಾಗಿ ನಡೆಯಲು ಕಾರಣಕರ್ತರಾದ ಶಶಿಕಾಂತರಾವ್ ಮೊದಲಾದಿಯಾಗಿ ಸಕಲರಿಗೂ ಧನ್ಯವಾದಗಳು ಅಭಿನಂದನೆಗಳು ಶರಣು ಶರಣಾರ್ಥಿಗಳು.

ತಮ್ಮವ
ವೈಲೇಶ ಪಿ ಯೆಸ್
ವಿರಾಜಪೇಟೆ
ಕೊಡಗು

7/1/2017

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು