ಕವಿವರ್ಯರು

ಕವಿವರ್ಯರು
~~~~~~~~
ಕವಿವರ್ಯರೋ ನಾವು ಕವಿವರ್ಯರೋ
ಅವರಿವರದೇ ಓದಿ ಕವನ ಬರೆಯುವವರೋ 
ಕಾಗದದಿ ಲೇಖನಿಯ ಹಣತೆ ಹಚ್ಚುವವರೋ
ಜಗದ ಹುಳುಕು ಕೆಡುಕುಗಳ ಕೇಳುವವರೋ
ಅಂಜದೇ ಅಳುಕದೇ ನಿಜವ ನುಡಿಯುವವರೋ ||ಪ||

ಅಲ್ಲೊಂದು ಸುಂದರ ಇಲ್ಲೊಂದು ಬಂಧುರ
ಸುಖ ದುಃಖ ಸಮಾನತೆ ಬರಹದ ಆಧಾರ
ಬವಣೆಯ ಬದುಕದುವೆ ಬರಹಕ್ಕೆ ಆಹಾರ ‌‌
ಕೋಟಲೆಗಳ ನುಂಗಿ ಬರೆವೆವು ಜೀವನ ಸಾರ
ಸಮಾಜದಿ ಅದುವೆ ನೀಡಿದೆ ನಮಗೆ ಆಧರ ||೨

ಹೆಗಲಿಗೆ ಹೆಗಲಾಗಿ ಗೆಳೆಯರ ಬಗಲಾಗಿ
ಅನುದಿನವೂ ಮೆರೆಯುವ ಗೆಳೆತನಕೆ ಜೊತೆಯಾಗಿ
ನಾನು ನನದೆಂಬ ವ್ಯಾಮೋಹವ ಬದಿಗಿರಿಸಿ
ನಿಜ ಮನುಜರೊಡಗೂಡಿ ಎಲ್ಲರೊಳಗೊಂದಾಗಿ
ಬರೆಯಬೇಕಿದೆ ಸಕಲರು ಮೆಚ್ಚುವ ಕವಿಯಾಗಿ

ಹಮ್ಮು ಬಿಮ್ಮುಗಳ ಮರೆತು ಕಲೆತು ಬೆರೆತು
ಇಂದು ನಾಳೆಗಳ ಹೊರತು ಬೇರಿಲ್ಲ ಇನಿತು
ಬರಿದೇ ಅಳಿದರೆ ನೆನಪಿಡದು ನಮ್ಮ ಜಗತ್ತು
ಕಿಚ್ಚು ಕೆಡುಕುಗಳ ತೊರೆದು ಬಾಳುವ ಅರಿತು
ಅಳಿದರೂ ಅಳಿಯದಿರಲಿ ನಾಮದ ಸಂಪತ್ತು

ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೨೭/೧೨/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು