ಮನದಾಳದ ಮಾತು ೦೩ ಪದ್ಮಮ್ಮ

ಮನದಾಳದ ಮಾತು: 03

ತಂಗಿ ಅಂದ್ರೆ ಹೀಂಗ್ ಇರಬೇಕಪ್ಪ
ನನ್ನ ಮನದ ಭಾವನೆಗೆ ತಕ್ಕ ತಂಗಿ. ಅಣ್ಣ ತಂಗಿ ಅಂದ್ರೆ  ಸ್ವಲ್ಪ ಜಗಳ ಕಿತ್ತಾಟ ಹೊತ್ತಾಟ ಅಣ್ಣನೆಂಬ ಜಂಬ ಇರಬೇಕು ಅಲ್ವಾ ಅದಕ್ಕೆ ಪದ್ದಮ್ಮ ತಂಗ್ಯಮ್ಮ ತಂಗ್ಯವ್ವೋ ಅಂತೆಲ್ಲಾ ತರ್ಲೆ ಮಾಡೋದು.

ಏನೇ ಆಗಲಿ ಒಬ್ಬ ಸದ್ಗ್ರಹಿಣಿ ಹೇಗಿರಬೇಕು
ಪ್ರತಿ ಮಹಿಳೆಯರ ಬಾಳಿನಲ್ಲಿ ಪತಿಯ ಪಾತ್ರ ಏನೆಂದು ಹಾಡಿನ ರೂಪದಲ್ಲಿ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ ತಂಗಿ ಪದ್ಮಾ ಶ್ರೀನಿವಾಸ ಹುಯಿಲಗೋಳ
ಹಾಡಿನ ಕಡೆಗೊಮ್ಮೆ ಇಣುಕಿ ಬಿಡುವ.

ರಕ್ಷಿಸಿಕೋ ನಿನ್ನೊಲವ... ಓ ವನಿತೆ...
ಅವನಿರದ ಈ ಬಾಳು ಬರಿದು ನೋಡಾ... ಆssss ಬರಿದು ನೋಡಾ

ನಿನ್ಹಣೆಯ ತಿಲಕದಲಿ ಕೈ ಬಳೆಯ ನಾದದಲಿ
ಕಾಲ್ಗೆಜ್ಜೆ ಝಣಪಿನಲಿ ನಾಸಿಕದ ನತ್ತಿನಲಿ
ಅವನಿಹನು ನೋಡಾ ಅವನಿಹನು ನೋಡಾ

ಈ ಸಾಲಿನಲ್ಲಿ ಇಂದಿನ ದಿನಮಾನದಲಿ ವಿಚ್ಛೇದನ ವಿರಸ ಪತಿಯ ಮರಣದಂತಹ ಕಾರಣಕ್ಕೆ ಏಕಾಂಗಿಯಾಗಿರುವ ಮಹಿಳೆಯರಿಗೆ ಮಾತ್ರ ಗೊತ್ತು ಪತಿಯ ಸ್ಥಾನಮಾನ ಎಂತಹ ಮಹತ್ತದ್ದು ಎಂದು. ಉಪಾಧ್ಯಾಯಿನಿ ಪದ್ಮಮ್ಮ ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ ಪತಿರಾಯರು ಎಲ್ಲೆಲ್ಲಿ ಇರುವರೆಂದು.

ನಿನ್ ಹೃದಯ ಮಿಡಿತದಲಿ ಪ್ರತಿ ಉಸಿರ ತುಡಿತದಲಿ
ಕಣ್ಣಿನಾ ಹೊಳಪಿನಲಿ ನಿನ್ಮನದ ಭಾವದಲಿ ಅವನೊಲವೇ ನೋಡಾ ಅವನೊಲವೆ ನೋಡಾ

ಆ ಜೀವ ನಲಿಯುತಿದೆ ನಿನ್ಹೆಜ್ಜೆ ಗುರುತಿನಲಿ
ಸಾರ್ಥಕ್ಯ ಪಡೆಯುತಿದೆ ಸಾಧನೆಯ ಹೊಳಪಿನಲಿ
ಪ್ರೇರಕನು ಅವನೇ ನೋಡಾ ಆ ಅವನಿಹನು ನೋಡಾ

ಈ ಸಾಲುಗಳ ಅರ್ಥ ಅವನೊಲವು ಎಲ್ಲಿಹುದು ಅವನ ಭಾವವೂ ಏನಿಹುದು ಎಂಬುದನ್ನು ಮೇಲಿನ ಸಾಲುಗಳು ಅರ್ಥಪೂರ್ಣವಾಗಿ ವಿವರಣೆ ನೀಡಿವೆ.
ನಿನ್ನ ಹೆಜ್ಜೆಯ ಛಾಪು ಅವನಲ್ಲಿ  ಯಾವ ಭಾವವನ್ನು ತರುವುದೆಂದೂ ತಿಳಿಸಿದ್ದಾರೆ.

ತೋರಿಕೆಯು ಅಲ್ಲಿಲ್ಲ ಸಂತೃಪ್ತಿ ಬಾಳೆಲ್ಲ
ಅರಿತು ಪೇಳ್ ಪ್ರತಿ ನುಡಿಯಾ
ಪೂಜೆಸು ಆ ಗುಡಿಯಾ
ಅವ ಮೌನದೀಪ್ತಿ ನೋಡಾ
ಆ ಅವ ಮೌನದೀಪ್ತಿ ನೋಡಾ.

ನಿಜಕ್ಕೂ ಸತಿಪತಿಯರೆಂದರೆ ತೋರಿಕೆಯ ಬದುಕಲ್ಲಾ ಅರಿತು ನುಡಿಯಾಡಿದರೆ ಬಾಳೊಂದು ಗೀತೆ ಎಂದು ಸವಿವರ ಸಮೇತರಾಗಿ ತಾನೊಬ್ಬಳು ಹೆಣ್ಣಾಗಿ ಹೆಣ್ಣೆಂದರೆ ಹೇಗಿರಬೇಕು ಎನ್ನುವ ಅರ್ಥಪೂರ್ಣ ವಿವರಣೆಯ ಸಾರವೇ ಈ ಗೀತೆ.

ಮುಂದುವರಿದು ಈಗಿನ ಹರೆಯದ ಹೆಣ್ಣು ಮಕ್ಕಳು ಟಿಕಳಿಗೆ ಮಾರು ಹೋಗಿ ತಿಲಕವ ಮರೆತರು. ಕೈಬಳೆ ಬದಲಾಗಿ ಏನೇನೋ ಬಳಸುವರು ಮುತ್ತಿನ ನತ್ತಿನ ಬದಲು ಕೈ ಬಳೆಯಂತಹ ರಿಂಗ್ ಮೂಗಿನ ನತ್ತಾಗಿದೆ. ಆದರೆ ತಂಗಿ ಪದ್ಮಾ ಶ್ರೀನಿವಾಸ ಹುಯಿಲಗೋಳರ  ಉಡುಪಿನ ವಿನ್ಯಾಸ ಮಾತಿನ ಪ್ರತಿ ಶಬ್ದಕ್ಕೂ ಅಣ್ಣ ಅಣ್ಣಾ ಎಂದು ಅವರಾಡುವ ಮಾತು. ನನಗೆ ಅಕ್ಕ ತಂಗಿಯರಿಲ್ಲವೆಂಬ ಭಾವವನ್ನು ಹೊಡೆದೋಡಿಸಿದೆ.

ನಿಜಕ್ಕೂ ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಮಾತನಾಡಿಸಿದರಷ್ಟೇ ಮಾತನಾಡುವ ಶ್ರೀನಿವಾಸ ಹುಯಿಲಗೋಳ್ ಇವರು ಸರಳ ಸಜ್ಜನ ವ್ಯಕ್ತಿಗಳು  ಏಕ ಪುತ್ರ ತುಂಬು ಸಂಸಾರ ಉತ್ತಮ ಸಂಸ್ಕೃತಿ ಇವರದು.

ರಾಣಿಬೆನ್ನೂರನಲ್ಲಿ ಪ್ರಥಮ ಕವಿಮಿಲನದ ಸಂಧರ್ಭದಲ್ಲಿ ಪದ್ಮಾ ಶ್ರೀನಿವಾಸ ಹುಯಿಲಗೋಳ್ ಇವರ ನಗುಮೊಗದ ಸಹಜ ನಿಜ ದರ್ಶನ ಅದಕ್ಕೂ ಮುನ್ನ ಎಫ್ ಬಿಯಲ್ಲಿ ಲೈಕ್ ಕಮೆಂಟ್ ಮಾಡಿಕೊಂಡಿದ್ದ ಜೀವ ಬಳಗದಲ್ಲಿ ಪ್ರೀತಿಯ ತಂಗಿ ಅಕ್ಕ.  ಕೋಪದಲ್ಲಿ ಒನಕೆ ಓಬವ್ವ ಪ್ರೀತಿಯಲ್ಲಿ ಅವ್ವ ದೇಶಭಕ್ತಿ, ಪತಿಭಕ್ತಿಯ ಪ್ರತೀಕ ತಮ್ಮ ಶಿಷ್ಯರಿಗೆ ಉತ್ತಮ ಶಿಕ್ಷಕಿಯು ಹೌದು ತಂಗಿ ಪದ್ಮಾ ನಮಸ್ಕಾರಗಳು ಕಣಮ್ಮ.

ತಮ್ಮವ
ವೈಲೇಶ ಪಿ ಯೆಸ್
ವಿರಾಜಪೇಟೆ
ಕೊಡಗು
29/12/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು