ಗಝಲ್ : ೧೦
ಗಝಲ್ : ೧೦
~~~~~~~~
ಗತ ನೆನಪುಗಳ ಹೊತ್ತು ಸಾಗಿರುವೆ ಮರೆಯಲಾರದೆ
ಗತಿಸಿದ ಹೆತ್ತವರ ನೆನಪಿನಲೇ ಸಾಗಿರುವೆ ಮರೆಯಲಾರದೆ
ಜನ ಜಂಗುಳಿಯ ಜಾತ್ರೆಯಲಿ ಅಪ್ಪನ ಬೆರಳು ಹಿಡಿದು
ನಡೆದ ಸಂಭ್ರಮದಿ ನಾನಿರುವೆ ಮರೆಯಲಾರದೆ
ಅಜ್ಜ ಅಜ್ಜಿಯರ ಮುದ್ದು ಮತ್ತೆ ದೊರಕುವುದೆಂದು
ಎಂದೆಂದಿಗೂ ಕಾಯುತಿರುವೆ ಮರೆಯಲಾರದೆ
ಎಳೆಯ ಗೆಳೆಯರ ನಿಸ್ವಾರ್ಥ ಸ್ನೇಹದೊಳು ಮುಳುಗಿ
ಇಂದಿಗೂ ಕನವರಿಸುತಿರುವೆ ಮರೆಯಲಾರದೆ
ಅಪ್ಪನ ಶವದ ಮೆರವಣಿಗೆಯಲಿ ಅಮ್ಮನ ಶೋಕ
ಗೀತೆಯ ಅನುಭವಿಸುತಿರುವೆ ಮರೆಯಲಾರದೆ
"ಸಿಡಿಲ"ನ ಬದುಕಿನಲಿ ಕಂಡ ಸುಖ ದುಃಖಗಳನು
ಮರಳಿ ಮೆಲುಕು ಹಾಕುತಿರುವೆ ಮರೆಯಲಾರದೆ
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೩೦/೧೨/೨೦೧೭
Comments
Post a Comment