ಮನದಾಳದ ಮಾತು ೦೨ ವೆಂಕಣ್ಣ
ಮನದಾಳದ ಮಾತು ಭಾಗ 2
₹₹₹₹₹₹₹₹₹₹₹₹₹₹₹₹₹₹₹₹₹
ರಾಣಿಬೆನ್ನೂರನ ಪ್ರಕಾಶ್ ಅಂಬರಕರರ ಬಾಲ್ಯದ ಗೆಳೆಯ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಪುಣ್ಯವಶಾತ್ ಪ್ರಕಟವಾದರೆ ಒಬ್ಬರಿಗೊಬ್ಬರು ಅಭಿನಂದಿಸುತ್ತಾ ಆನಂದಿಸುತ್ತಾ ಕಾಲ ಕಳೆದವರು ಚಿಕ್ಕಿ ಟಾಪಿಗಳೊಡನೆ ಸಂತಸ ಹಂಚಿಕೊಂಡರೆ ಅಂದಿನ ಕಾಲಕ್ಕೆ ಅದೇ ಮಹಾನ್ ಗೆಳೆತನದ ಪರಮಾವಧಿ.
ಇಂದಿನ ಹಾಗೆ ಫೇಸ್ಬುಕ್ಕ್ ಇಲ್ಲ ವಾಟ್ಸ್ಅಪ್ ಇಲ್ಲ ಅದಿನ್ನೂ ಹೆಚ್.ಆರ್. ವೆಂಕಣ್ಣನವರ ಬಳಿ ಸುಳಿದಿಲ್ಲ ಗೆಳೆಯರನ್ನು ಮಾತ್ರ ಬಿಡಲೊಲ್ಲರೂ ಇಬ್ಬರೂ. ಮಹಾನ್ ರಾಷ್ಟ್ರ ಪ್ರೇಮದ ಗೀತೆಯ ರಚಿಸಿ ಗೆಳೆಯ ಪ್ರಕಾಶ್ ಅಂಬರಕರರ ಕರದಲ್ಲಿಟ್ಟರು ಅವರದಕ್ಕೆ ಸಂಗೀತ ತಾಳಮೇಳಗಳ ಸ್ನೋ ಪೌಡರ್ ಹಚ್ಚಿ ಹರಿಬಿಟ್ಟಿರುತ್ತಾರೆ. ಹೆಚ್.ಆರ್. ವೆಂಕಣ್ಣನವರ ರಾಷ್ಟ್ರಭಕ್ತಿಯತ್ತ ಹರಿಯಲಿ ತಮ್ಮಗಳ ಚಿತ್ತ.
ಭಾರತ ದೇಶದ ಮಕ್ಕಳು ನಾವು
ಸುಂದರ ಭಾರತ ಕಟ್ಟೋಣ
ಸುಮಧುರ ಕನಸಿನ ಹೂಗಳು ನಾವು
ಸಂಸ್ಕೃತಿ ಸಿರಿಯನು ಬೆಳೆಸೋಣ
ಭಾರತೀಯ ಸಂಸ್ಕೃತಿಯ ಜೊತೆಗೆ ಸುಂದರ ಭಾರತವನ್ನು ಕಟ್ಟೋಣ ಎಂಬ ಹಂಬಲ
ಮಾನವ ಹೃದಯ ಮಂದಿರದಲ್ಲಿ
ಪ್ರೀತಿಯ ಜ್ಯೋತಿ ಹಚ್ಚೋಣ
ಹಿಂದೂ ಮುಸ್ಲಿಂ ಕ್ರೈಸ್ತರೆನ್ನದೆ
ಮಾನವ ಕುಲವನು ಬೆಳೆಸೋಣ
ಧರ್ಮ ಮತವ ಮೀರಿ ಪ್ರೀತಿಯ ಜ್ಯೋತಿಯನ್ನು ಹೃದಯ ಮಂದಿರದಲ್ಲಿ ಹಚ್ಚಿ ಮಾನವ ಕುಲವನು ಬೆಳೆಸೋಣ
ಪ್ರೀತಿ ಪ್ರೇಮದಿ ಬಾಳುತ ನಾವು
ಶಾಂತಿ ದೇಶವ ಕಟ್ಟೋಣ
ದ್ವೇಷ ಅಸೂಯೆ ಮತ್ಸರ ಮರೆತು
ನೆಮ್ಮದಿ ಜೀವನ ನಡೆಸೋಣ
ದುಷ್ಟರ ಬದುಕಿನ ಕತ್ತಲೆ ಕಳೆದು
ಜ್ಞಾನದ ಬೆಳಕನು ಬೀರೋಣ
ಸತ್ಕುಲ ಸಮಾಜ ನಿರ್ಮಿಸುವಲ್ಲಿ
ಸತತ ಪ್ರಯತ್ನವ ಮಾಡೋಣ
ದ್ವೇಷ ಅಸೂಯೆ ಮತ್ಸರ ಮರೆತು ದುಷ್ಟರಿಗೂ ಜ್ಞಾನದ ಬೆಳಕು ಬೀರಿ ಸತ್ಕುಲ ಸಮಾಜವನ್ನು ಕಟ್ಟುವ ಕೆಲಸವಾಗಲೆಂಬ ಹಂಬಲ ವ್ಯಕ್ತಪಡಿಸಿದ್ದಾರೆ.
ಯುದ್ಧ ಬೇಡ ಶಾಂತಿಯು ಬೇಕು
ನೆಮ್ಮದಿ ಜೀವನ ಒಂದೇ ಸಾಕು
ಸಾಯುವ ಮೊದಲೇ ಸಾರಲೇಬೇಕು
ಮಾನವ ಧರ್ಮ ಒಂದಿರಬೇಕು
ಪ್ರಾಣ ಹೋದರೂ ಸರಿಯೇ ಮಾನವ ಧರ್ಮ ಒಂದೇ ಇರಬೇಕು ಎಂಬ ಇವರ ನುಡಿಗೆ ಸಾಟಿಯುಂಟೆ ಇಂತಹ ಕವಿವರೇಣ್ಯರು ನಮ್ಮೊಂದಿಗೆ ಇರುವುದು ಭಾರತಾಂಬೆಯ ಭಾಗ್ಯವೇ ಸರಿ ಹಿರೇಕೆರೂರಿನ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂತಹ ಒಬ್ಬ ಗುರುಗಳು. ಏನು ಎಲ್ಲ ದೇಶಭಕ್ತರೂ ರಾಣಿಬೆನ್ನೂರನಲ್ಲಿ ಈಸೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ ಅನಿಸುತ್ತದೆ. ಹೆಚ್.ಆರ್.ವೆಂಕಣ್ಣನವರೆ ನಿಮಗಿದೊ ನನ್ನ ಗೀತೆ ನನ್ನವರ ಗಾಯನ ತಂಡದ ಪರವಾಗಿ ನನ್ನ ನಮನಗಳು ಅಭಿನಂದನೆಗಳು.
Comments
Post a Comment