ಭಾವಗೀತೆ~ ಆಗಸದೊರೆ

ಆಗಸದೊರೆ
~~~~~~~
ಮೂಡಣದೊಳು| ಮೂಡಿಹ| ಆಗಸದೂರ| ಅದಿತಿ|
ಹರಸುತಲಿ| ಉಸಿರು| ನೀಡಿದೆ|
ಭಾವನೆಯೊಳು| ಬಾನಾಡಿ| ನಲಿಯುತಲಿ| ಹಾರಾಡಿ|
ಕನವರಿಸಿ| ಕೋಗಿಲೆ| ಹಾಡಿದೆ ||ಪ||

ಮುಳುಗಿಸಿದೆ| ರವಿಯ| ಮಂಜಹನಿಯು| ಅಂಜುತಾ|
ಬುವಿಯೊಡಲ| ಸೇರುವಾ| ಹರುಷಾ|
ಕೊರಗುತಿದೆ| ಇಬ್ಬನಿ| ಕಿರಣಗಳ| ಕರೆಗೆ|
ಮನವಿಲ್ಲದೆ |ಬುವಿಯ| ಬಿಡಲಾ||೧||

ಕಾನನದೊಳು| ಕುಸುಮ| ಅರಳಿರಲು| ಘಮಲು|
ನಗುನಗುತಾ| ಭ್ರಮರ|ಬರಲು|
ಕೊಳದೊಳಗೆ| ಕಮಲ| ಗುನುಗುನಿಸಿ| ಅರಳಿ|
ತೆರೆದಿರಲು| ನಗುವಾ| ಮೊಗವಾ ||೨||

ಅರಳಿದನು| ಅರುಣ| ಪಡುವಿನೆಡೆ| ಪಯಣ|
ತಿನಿಸುಣಿಸಿ| ಇಳೆಯ| ಬೆಳೆಗೆ|
ಸಕಲರನು| ತಣಿಸಿ| ಜೀವಿಗಳನು| ಬೆಳಸಿ|
ಅನುದಿನವೂ| ಹರಸಿ| ನಡೆವಾ||೩||

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೯/೧೨/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು