ಚೆಲ್ಲಿಬಿಡು ಗೆಳತಿ

ಚೆಲ್ಲಿ ಬಿಡು ಗೆಳತಿ
~~~~~~~~~
ಚೆಲ್ಲಿ ಬಿಡು ಗೆಳತಿ ನಿನ್ನೊಳಗ ಪ್ರೀತಿ
ಅನಾಥವಾಗಿಹುದು ಅಳಿಯದೆಲೆ ಭೀತಿ ||ಪ||

ನನ್ನೆದೆಯ ತುಂಬಾ ನೀನಿಟ್ಟ ತತ್ತಿ
ಎದೆ ಬಿರಿದು ಹರಡಿಹುದು ನಿನ್ನದೇ ಬಿತ್ತಿ
ಕಂಡಿಹೆನು ಪ್ರೀತಿಯ ಮಳೆಯಿದು ಚಿತ್ತಿ
ಅರಳಬೇಕಿದೆ ಪ್ರೀತಿ ಮನದುಂಬಿ ಹೊತ್ತಿ||೧||

ಜೋಗದ ಝರಿಯಂತೆ ಹರಿದಿದೆ ಒಲವು
ತಡೆಯದೇ ನಿಂತಿರುವೆ ನನಗಿಲ್ಲ ಬಲವು
ಕನವರಿಸುತಿರುವೆ ನಿನ್ನ ಅಂದದ ನಿಲುವು
ನೋಟಕೂ ಮಿಗಿಲು ಒಳ ಮನದ ಚೆಲುವು||೨||

ಪ್ರೀತಿಯೊಂದೆ ನಮ್ಮಯ ಪಾಲಿನ  ಉಸಿರು
ಬಾಳ ಬೆಳಗುವ ನಗುವೆ ಒಲವ ಹಸಿರು
ಮೆತ್ತಿಕೊಳ್ಳದಿರೆ ಜಾತಿ ವಿಜಾತಿಯ ಕೆಸರು
ಉಳಿಯಲಿ ಕಾಲಾನಂತರವೂ ಎಮ್ಮ ಹೆಸರು||೩||

ಉಳಿದುಬಿಡು ಗೆಳತಿ ನೀನಾಗಿ ಎನ್ನ ರತಿ
ಅಳಿದು ಹೋಗಿ ಸೇರುವವರೆಗೂ ಧರತಿ||೪||

ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೩೦/೧೨/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು