ಶ್ರೀ ಪ್ರಕಾಶ್ ಅಂಬರ್ಕರ್
ಕವಿಬಂಧುಗಳೆ,ಮಿತ್ರಾತ್ಮೀಯರೆ
ನನ್ನ ಗೀತೆ ನನ್ನವರ ಗಾಯನ ಈ
ಕಾರ್ಯಕ್ರಮದ ಸಂಚಾಲಕರಾದ
ಶ್ರೀ ಪ್ರಕಾಶ್ ಅಂಬರಕರ್ ಇವರ
ಬಗ್ಗೆ ಏನೆಂದು ಹೇಳಲಿ ಏನು ಹೇಳಿ
ಅವರ ಋಣ ತೀರಿಸಬಹುದು.
ಹಿರೆಕೆರೂರು ಬಳಿಯ ಚಿಕ್ಕೆರೂರಿನಲ್ಲಿ ವಾಸವಿದ್ದು ಹಳ್ಳಿ ಹಳ್ಳಿಗಳಲ್ಲಿ ಉಪ್ಪು ಮಾರಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾತೊರೆಯುತಿದ್ದ ಶ್ರೀಯುತ ಪ್ರಕಾಶ್ ಅಂಬರಕರರಿಗೆ ಹಂಸಭಾವಿಯ MASC ಕಾಲೇಜಿನ ಹಾಲಿ ವಿಶ್ರಾಂತ ಪ್ರಿನ್ಸಿಪಾಲರಾದ ಚನ್ನಬಸಣ್ಣ ಗೌಡ ಯತ್ನಳ್ಳಿಯವರು ಕರಪಿಡಿದು ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹಧಾಯಕ ವಾತಾವರಣ ಕಲ್ಪಿಸುವ ಮುಖಾಂತರ ಶ್ರೀಯುತ ಪ್ರಕಾಶ್ ಅಂಬರಕರರ ಮನಗೆದ್ದ ಗುರುಗಳಾಗುತ್ತಾರೆ.
ಗುರುಗಳ ವಿಶ್ರಾಂತ ಜೀವನದ ಶುಭಾರಂಭವನ್ನು ಕವಿಗೋಷ್ಠಿಯ ಜೊತೆಗೆ "ಶ್ರೀಮತಿ ಉಷಾ ಸಿ ಯತ್ನಳ್ಳಿ ಸಧ್ಭಾವನ ವೇದಿಕೆ" ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ನಮ್ಮ ಕವಿಮಿಲನಕೆ ನಾಂದಿ ಹಾಡಿದ ಕೀರ್ತಿ ಪ್ರಕಾಶ್ ಅಂಬರಕರರದು.
ದಿನಾಂಕ 9/7/2016ರ ಮುಂಜಾವ 6:30ರ ಭ್ರಾಹ್ಮೀ ಮುಹೂರ್ತದ ಸಮಯ ಗೆಳೆಯರಾದ ಶಿವಾನಂದ ಅವಟಿ ಸರ್, ಹಿರಿಯ ಮಿತ್ರಾತ್ಮೀಯರಾದ ಪುಂಡಲೀಕ ನಾಯಕ, ತಳಮಟ್ಟದ ನಾಯಕರೆಂದು ಖ್ಯಾತಿವೆತ್ತ ಶ್ರೀ ವಡ್ಡಗೆರೆ ನಾಗರಾಜಯ್ಯನವರೊಂದಿಗೆ ಬೆಳಗ್ಗೆ ನಮ್ಮ ಉಷಾಕ್ಕ ಕಳಿಸಿದ ಕಾಫಿ ಹೀರುತ್ತಾ ಕುಳಿತಿರುವಾಗ ಗೀತಾ ಗಾಯನ ಕಾರ್ಯಕ್ರಮದ ಬಗ್ಗೆ ಬೀಜಾಂಕುರಿಸಿದವರು ಪ್ರಕಾಶ್ ಅಂಬರಕರರು.
ಹೀಗೆ ಬಿತ್ತಿ ಬೆಳೆದ ಬೀಜವಿಂದು ಬೆಳೆದು ಹೆಮ್ಮರವಾಗಿ ನಾಡಿನ ವಿವಿಧ ಮೂಲೆ ಮೂಲೆಯಲ್ಲಿ ಸಂಗೀತ ಆಸಕ್ತರ ಕಿವಿಗಿಂಪಾಗಿ ಮನಗೆಲ್ಲುವತ್ತ ದಾಪುಗಾಲು ಹಾಕಿದೆ. ಕರುನಾಡ ವಿವಿಧ ಪ್ರದೇಶದ 24 ಕವಿ ಕವಯತ್ರಿಯರ ಪ್ರಸಿದ್ಧಿಗೆ ನಾಂದಿಯಾಯಿತು. 9/7/2016ರ ಕಾರ್ಯಕ್ರಮದಲ್ಲಿ ಭಾಗಿಯಗೋಕೆ ಹಾಗೂ ಹಲವರನ್ನು ಸನ್ಮಾನಿಸೋಕೆ ಅಂತಾನೆ ಬೀದರಿನ ಅಪ್ಪಾಜಿ ಖ್ಯಾತಿವೆತ್ತ ಶ್ರೀಯುತ M.G. Deshpande ಸನ್ಮಾನ್ಯ ಹಂಶಕವಿ ಇವರು ಸಹ ಆಗಮಿಸಿ ಆಲಿಂಗಿಸಿ ಆಶೀರ್ವಾದ ಮಾಡಿದರು.
ಪ್ರಕಾಶ್ ಅಂಬರಕರರ ಕನಸುಗಳು ನನಸಾದುದಕ್ಕೆ ಸಾಕಷ್ಟು ಹೆಸರು ಮಾಡಿರುವ ನನ್ನ ಗೀತೆ ನನ್ನವರ ಗಾಯನದ ಧ್ವನಿಸುರುಳಿಯೇ ಸಾಕ್ಷಿಯಾಗಿದೆ.
ಹಾಗೂ ಶ್ರೀಯುತ ಶಶಿಕಾಂತರಾವ್, ಶ್ರೀಯುತ ಬೊಮ್ಮಣ್ಣನವರು, ರೋಟರಿ ಚಿಮಣಿ ಹಿಲ್ ಬೆಂಗಳೂರು ಇಲ್ಲಿಯ ಅಪಾರ ಆಡಳಿತ ವರ್ಗ ಕಾರ್ಯಕ್ರಮಕ್ಕೆ ಆಗಮಿಸಿ ಹರಸಿ ಹರುಷವನ್ನುಕ್ಕಿಸಿದ ಅಪಾರ ಅಭಿಮಾನಿಗಳ ಹಿತೈಷಿಗಳ ಗೆಳೆಯ ಗೆಳತಿಯರ ಸೋದರಿ ಸೋದರರ ಪ್ರೀತಿಗೆ ಪಾತ್ರರಾಗಲು ನಾಂದಿ ಹಾಡಿದ ಆ ಕ್ಷಣಗಳು.
ಶ್ರೀಯುತ ಪ್ರಕಾಶ್ ಅಂಬರಕರರು ಕರಾರಸಾಸಂಸ್ಥೆಯ ಹಾವೇರಿ ಘಟಕದ ನಿರ್ವಾಹಕರಾಗಿ ದುಡಿದವರು. ಮುಂದೆ ಬನ್ನಿ ಮುಂದೆ ಬನ್ನಿ ಎನ್ನುತ್ತಾ ತಾವೇ ಮುಂದೆ ನಿಂತು ಕರುನಾಡ 24 ಕವಿಗಳ ಕವಿತೆಗಳನ್ನು ಹಾಡಾಗಿ ಪರಿವರ್ತಿಸಿ ಮೆರೆಸಿದರು. ಈ ಧ್ವನಿಸುರುಳಿಯು ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲುವುದು ಖಚಿತವಾಗಿದೆ.
ಈ ಧ್ವನಿಸುರುಳಿಯ ನಿರೂಪಣೆಯ ಮುಖಾಂತರ ನಮ್ಮಗಳ ಹೆಸರು ಕೇಳುಗರ ಕಿವಿಗಿಂಪಾಗಿ ಮನತಂಪಾಗಿ ನಲಿಯುವಂತೆ, ಗೀತ ರಚನಾಕಾರರ ಮನದಿಂಗಿತ ಭಾವನೆಗಳನ್ನು ಮನಮುಟ್ಟವಂತೆ ಹರವಿ ಹರಿಬಿಟ್ಟಿರುತ್ತಾರೆ.
ನಾನೇ ಎನ್ನುವವರೇ ಇರುವಂತಹ ಈ ಕಾಲಘಟ್ಟದಲ್ಲಿ
ತಮ್ಮ ಆತ್ಮೀಯ ಗೆಳೆಯ ಗೆಳತಿಯರಿಗೆ ಅವಕಾಶ ಒದಗಿಸಿ ಕೊಟ್ಟು ದೂರದಿಂದಲೇ ಸಂತಸ ಅನುಭವಿಸಿದ್ದಾರೆ. ಅದರ ಕೀರ್ತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಮನಸ್ಸು ಮಾಡಿದ್ದಾರೆ. ಎಲ್ಲರೊಂದಿಗೂ ಏಕಪ್ರಕಾರವಾಗಿ ನಡೆದುಕೊಳ್ಳವ ಇವರು ಪ್ರಾತಃ ಸ್ಮರಣೀಯರು ಎಂದರೆ ತಪ್ಪಾಗಲಾರದು.
ಶ್ರೀಯುತರ ಕುಟುಂಬ ವರ್ಗದವರಿಗೆ ಧೈವಾನುಗ್ರಹವಾಗಲೆಂದು ಆ ಶ್ರೀ ಬ್ರಹ್ಮಲಿಂಗೇಶ್ವರನಲ್ಲಿ ಬೇಡಿಕೊಳ್ಳುವ ಹೊರತು ಇನ್ನೇನು ನೀಡಲು ಸಾಧ್ಯ?
ಎಂದೆಂದಿಗೂ ಕನ್ನಡಮ್ಮನ ಸೇವೆಯಲ್ಲಿ
ತಮ್ಮೆಲ್ಲರ ಗೆಳತನ ಬಯಸುವ
ತಮ್ಮವ
ವೈಲೇಶ ಪಿ ಯೆಸ್
ವಿರಾಜಪೇಟೆ ಕೊಡಗು
ದಿನಾಂಕ 25/12/2016
Comments
Post a Comment