ಗಝಲ್-೮

ಗಝಲ್- ೮
~~~~~~~
ಮಹಾತ್ಮರು ಜನಿಸಿದ ಜಗದಲಿ ದುಷ್ಟರೂ ನಮ್ಮ ಜೊತ ಜನಿಸಹರಲ್ಲವೇ ಅದೇ ಜೀವನ
ಮಹಾ ದುಷ್ಟರು ಹುಟ್ಟಿದ ನಾಡಿನಲಿ ಸಂತರು ನಮ್ಮೊಳಗೆ ಹುಟ್ಟಿಹರಲ್ಲವೇ ಅದೇ ಜೀವನ

ಮಹಾ ಕರ್ಮಠರ ಕಾಲವದು ಹನ್ನೆರಡನೆಯ ಶತಮಾನ
ಬಸವಣ್ಣನವರ ಸಾಧನೆಗೆ ನಾವು  ಬೆಲೆ ಕಟ್ಟಲಾರೆವಲ್ಲವೆ ಅದೇ ಜೀವನ

ವಜ್ರ ವೈಡೂರ್ಯಗಳ ಮಾರುತ್ತಿದ್ದೆವು ಅಂದು ಬೀದಿಯಲ್ಲಿ
ಇಂದು ಚಪ್ಪಲಿಗಳ ಹವಾನಿಯಂತ್ರಿತ ಕೊಠಡಿಯಲ್ಲಿ ಇಟ್ಟು ಮಾರುತ್ತಿರುವೆವಲ್ಲವೆ ಅದೇ ಜೀವನ

ಕಾನೂನು ಕಟ್ಟಳೆಗಳು ಉಲ್ಲಂಘಿಸಿದರೆ ಖಂಡಿತ ಶಿಕ್ಷೆ
ಕಟ್ಟಳೆಗಳ ಉಲ್ಲಂಘಿಸಿದೆ ಎಂದು ಬೀಗುವವರೂ  ಇರುವವರಲ್ಲವೇ ಅದೇ ಜೀವನ

"ಸಿಡಿಲ" ನು ಜೀವಿಸುತ್ತಿರುವ ದೇಶದಿ ಶಾಂತಿ ನೆಮ್ಮದಿ ನೆಲೆಸುವಂತಾದರೆ ಸಕಲರೂ ಆನಂದಿಸುವರಲ್ಲವೇ ಅದೇ ಜೀವನ

*ಸಿಡಿಲು*
*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೧೫/೧೨/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು