ಸುಮಬಾಲೆ

ಸುಮಬಾಲೆ
~~~~~~~
ಕಡಲ ತಡಿಯ ಮರಳ ಮರಳಿ ಮುತ್ತಿಕ್ಕುವ ಸಾಗರದಲೆ
ಬತ್ತಿದರೂ ಅತ್ತಿತ್ತ ಸುತ್ತ ತೇವಗೊಳಿಸುವ  ಪ್ರೇಮ ಸೆಲೆ
ಬಾಳಿನ ಬಯಕೆಯ ಭಾವ ಸುರಿಸುವ ಓ ಸುಮಬಾಲೆ
ಬೀಸದಿರು ಸುಮಕೋಮಲೆ ನಿನ್ನೊಲವ ಮಾಯಾಬಲೆ

ದೂರತೀರವನರಸಿ ಬರುವ ಝಹಜದು ಸುಮಧುರ
ಬರಿಗಣ್ಣಿಗೆ ಕಾಣಲದುವೆ ಸುಂದರ ಬಲು ಸುಂದರ
ಬಂಧುರದೆ ಬಡಿದಾಡೆ ತಿಳಿವುದಾ ಸುಂದರದ ಹಂದರ
ಸುಮಧುರ ಸುಂದರ ಬಂಧುರದೆ ನೀ ಎನ್ನ ಚಂದಿರ
ಬಾಳುವೆಗೆ ಬೇಕಿಹುದು ನಿನ್ನೊಲವ ಹೃದಯಮಂದಿರ

ಹಸಿರು ವನ್ಯರಾಶಿಯ ಹಿರಿಮರದಿ ಹೊನ್ನಿನುಯ್ಯಾಲೆ
ಹಗಲಿರುಳು ತೂಗಿಕೊಳುತಿಹಳು ಕಮಲಗಣ್ಣಿನ ಬಾಲೆ
ನಾಚಿ ನಿಂತು ಕಣ್ತುಂಬಿಕೊಂಡವು ವನಸುಮದ ಮೊಲ್ಲೆ
ನಾ ಹಿಡಿದಿರುವೆ ನನ್ನೊಲವ ಪ್ರೀತಿಯ ಸುಮದ ಮಾಲೆ
ತೋರಲಾರೆಯ ಗೆಳತಿ ಕರುಣೆ ನಿನ್ನಿನಿಯನ ಮ್ಯಾಲೆ

ಬಾನಾಡಿಗಳಿಂಚರ ಭಾವಗಳಿಗೆನಿತು ರಸಸಂಚಾರ
ಬಾಡಿ ಬೆದರಲಿಲ್ಲ ಗೆಳತಿ ಕೇಳಿ ವ್ಯಾಘ್ರನ ಅಬ್ಬರ
ಗಿರಿನವಿಲ ನೋಡುತ ನಿಂದೆ ಬಲು ಮಧುರ
ನೆನಪಾಯಿತು ನಿನ್ನ ಸುಂದರ ಮಧು ತುಂಬಿದಧರ
ಬಾಳ ಬೆಳಗುವೆ ನಾನೆಂದು ಕಾದಿರುವೆ ಬಾಲೆ ಬಾರ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು