ಮನದಾಳದ ಮಾತು ೦೧ ಸಿದ್ರಾಮ‌ ಹೊನ್ಕಲ್

ಸರ್ವ ಸನ್ಮಾನ್ಯ ಶ್ರೀ ಸಿದ್ರಾಮ ಹೊನ್ಕಲ್ ಇವರು ಬರೆದೋದಿದ ಕವಿತೆ ಇವರ ಕವಿತೆಯನ್ನು ವಿಮರ್ಶೆ ಮಾಡುವಷ್ಷು ಎತ್ತರಕ್ಕೆ ನಾ ಬೆಳೆದಿಲ್ಲಾ ಆದರೂ  ಒಂದೆರಡು ನಲ್ನುಡಿಗಳು ಮೇರು ವ್ಯಕ್ತಿತ್ವಕ್ಕೆ ನನ್ನ ಪ್ರಣಾಮಗಳು.   ಶ್ರೀ ಸಿದ್ರಾಮ ಹೊನ್ಕಲ್ ಇವರು ಬರೆದ ಪುಸ್ತಕಗಳು ಪಠ್ಯ ಪುಸ್ತಕಗಳಾಗಿವೆ. ಇವರ ಬರಹದ ಮೇಲೆ ಪಿ ಹೆಚ್ ಡಿ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದಾರೆ ಇಂತಿಪ್ಪ ಸಿದ್ರಾಮ ಹೊನ್ಕಲ್ ರನ್ನು ನಾನು ವಿಮರ್ಶೆ ಮಾಡುವುದು ತರವೇ.

ಯಾರಿಗಾಗಿ ಹಾಡಲಿ ಏನೆಂದು ಹಾಡಲಿ  ಕೇಳುವ ಮನಸ್ಸುಗಳಿಲ್ಲೋ

ಶಾಂತಿಯ ನಾಡಲಿ ಸಾವಿನ ಓಕುಳಿ ಎದೆ ಒಡ್ದು ಹೋಯಿತಲ್ಲೋ.

ಇಲ್ಲಿ ಎದೆ ಒಡ್ದಿದ್ದು ಸ್ವಾರ್ಥಕ್ಕಲ್ಲ ಸ್ವಜನ ಪಕ್ಷಪಾತಕ್ಕಲ್ಲ ತನ್ನವರ ಹಿತಕ್ಕಲ್ಲ ಅನ್ಯಾಯಗಳನ್ನು ಕಂಡು ನೋವಿನಲ್ಲಿ ಒಡೆದ ಎದೆ ಅಲ್ಲವೇ.

ರಿಮೋಟು ಕಂಟ್ರೋಲ್ ಕಂಡು ಹಿಗ್ಗು ಪಟ್ಟವರೆಲ್ಲಾ ಹಿಗ್ಗಿಸಿದವರೆಲ್ಲರು ರಿಮೋಟು ಬಾಂಬುಗಳಿಗೆ ಸಿಡಿದು ಬಿದ್ದರಲ್ಲೋ.

ವಿಜ್ಞಾನ ಮುಂದುವರಿದದು ನಮ್ಮ ಹೆಮ್ಮೆಯಲ್ಲ ಅದೇ ವಿಜ್ಞಾನ ನಮ್ಮವರ ಅಳಿವಿಗೆ ಕಾರಣವಾದುದು ದುಃಖದ ಸಂಗತಿಯೆಂಬ ಭಾವನೆಗಳು.

ಯುಗಾದಿಯ ಬೇವು ಬೆಲ್ಲವಿಲ್ಲ ಹೊಸ ಬಟ್ಟೆಯಿಲ್ಲ ಸತ್ತವರ ಸಂಬಂಧಿಗಳಿಗೆ ಶವಗಳೆ ಇಲ್ಲವಲ್ಲೋ.

ಸಂಬಂಧಪಟ್ಟವರಿಗೆ ಶವವೂ ದೊರಕದಷ್ಟು ಕ್ರೂರವಾಗಿ ರಕ್ತಮಾಂಸವು ವಾಹನ, ಕಟ್ಟಡಗಳ ನೆತ್ತಿಯ ಮೇಲ್ಹತ್ತಿ ಕುಳಿತುದು ಕಂಡು ಹಬ್ಬದ ದಿನ ಹೊಸ ಬಿಳಿಬಟ್ಟೆಯಲ್ಲಿ ಸುತ್ತಿ ತಂದ ಮಾಂಸದ ತುಣುಕುಗಳ ನೆನಪು ಕಾಡಿದೆ.

ನಿನ್ನೆ ಬಾಂಬೆಯಲ್ಲಿ ಇಂದು ದಿಲ್ಲಿಯಲ್ಲಿ ನಾಳೆ- ಎಲ್ಲಿ ಎಂಬ ದಿಗಿಲು ಬೆನ್ನು ಹತ್ತಿತ್ತಲ್ಲೋ..

ಮನಸ್ಸುಗಳ ಕೆಡವಿ ಮಸಣವ ಕಟ್ಟುವವರೇ ಕೇಳಿ  ಇಲ್ಲಿ ಕೆಂಡದಾ  ಮಳೆ ತಂದಿರಲ್ಲೋ

ಗಾಂಧಿಯ ನಾಡಲಿ ಗುಂಡಿನ ಮಳೆಗರೆದು ಭೂತಾಯಿ  ನೆತ್ತರು ಕುಡಿದು ಅತ್ತಳಲ್ಲೋ..

ಈ ಕ್ರೂರ ಕೃತ್ಯದಿಂದ ಭವಿಷ್ಯದ ದಿಗಿಲಾಗಿ ಭೂತಾಯಿ ಕೂಡ ಅಳುವಂತಾಗಿದೆ ಇನ್ನು ಹೊತ್ತು ಹೆತ್ತವರ ಒಡಲಾಳದ ಪಾಡೇನು ಎಂಬ ಭಾವ.

ಸುಟ್ಟ ಬೂದಿಯಲ್ಲೇ ಹುಟ್ಟಿ ಬರುವ ಫಿನೀಕ್ಸ್ ಹಕ್ಕಿಯ ಹಾಗೇ ಸಾಮರಸ್ಯದ ಮನಸ್ಸು ಹುಟ್ಟ ಬೇಕೋ

ಅಲ್ಲಿಯವರೆಗೆ ಯುಗಾದಿಯ ಬೇವಿನೊಂದಿಗೆ ಬೆಲ್ಲವೂ ಕಹಿಯಾಯಿತಲ್ಲೋ..... 

ಮತ್ತೆ ಸೌಹಾರ್ದ ಸಾಮರಸ್ಯ ಒಡಮೂಡಲಿ ಈ ಯುಗಾದಿಯು ಭಾರತದ ಪಾಲಿಗೆ ಸಿಹಿಯಿಲ್ಲದ ಕಹಿಯಾಯಿತೆಂಬ ಭಾವನೆಗಳ ಮಹಾಪೂರ.

ತಾನು ತನ್ನವರು ಎಂಬ ಸ್ವಾರ್ಥದ ಮನಗಳ ನಡುವೆ ದೇಶಕ್ಕಾಗಿ ಎಲ್ಲೋ ಸತ್ತ ಸಾಮಾನ್ಯ ಪ್ರಜೆಗಾಗಿ ಮರುಗಿದ ಏಕೈಕ ಕವಿಮನನುಡಿಯಿದು.

ಶ್ರೀ ಸಿದ್ರಾಮ ಹೊನ್ಕಲ್ ಇವರು ಎಲ್ಲಾ 23 ಕವಿಗಳ ಕವಿತೆಯನ್ನು ಹಾಡಿ ಹೊಗಳಿದರೂ(ಸ್ವತಃ ತಾನೇ ಬರೆದ) ತನ್ನ ಕವಿತೆಯ ಬಗ್ಗೆ ಏನೂ ಹೇಳಲಾರದೇ ಹೋದರು. ಇದೆ ನಿಜವಾದ ವಿಮರ್ಶೆ 27/11/2016 ರಂದು ನನಗೆ ಇವರ ಕವಿತೆಯ ಬಗ್ಗೆ ಎರಡು ಮಾತನಾಡುವ ಅವಕಾಶ ಇದ್ದರೂ ಸಹ ಸಮಯಾಭಾವದಿಂದ ಸುಮ್ಮನಿದ್ದೆ.
ಸಿದ್ರಾಮಣ್ಣ. ಅನ್ಯಥಾ ಬಾವಿಸದಿರಿ ನಿಮ್ಮಿಂದ ಹೊಸತೊಂದು ಭಾವಗಳು ಹೊಸತೊಂದು ಲಹರಿಯನ್ನೇ ಶುರು ಹಚ್ಚಿದ್ದೀರಿ ಶುಭವಾಗಲಿ.

ಇದೆಕ್ಕೆಲ್ಲಾ  ಕಾರಣರಾದ ರೋಟರಿ ಕ್ಲಬ್ ಚಿಮಣಿ ಹಿಲ್ ಅಧ್ಯಕ್ಷರು ಆದ ಶಶಿಕಾಂತರಾವ್  ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪ್ರಕಾಶ್ ಅಂಬರಕರರಿಗೆ ನನ್ನ ಹೃತ್ಪೂರ್ವಕ ವಂದನೆಗಳೊಂದಿಗೆ ಅಭಿನಂದನೆಗಳನ್ನು ಅರ್ಪಿಸುತ್ತೇನೆ.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು