ದಾನವ್ವ ಬರದಿರು
ದಾನವ್ವ ಬರದಿರು
~~~~~~~~~~
ದಾನವ್ವ ಮತ್ತೆ ಬರದಿರು ಜಗಕೆ ಹೆಣ್ಣಾಗಿ
ನರರಾಕ್ಷಸರ ನೀಚ ಕೃತ್ಯಕೆ ಕಣ್ಣು ಕುರುಡಾಗಿ
ಹುಟ್ಟಿದರೂ ಸಾಕು ಕಾನನದ ಕಹಿ ಹಣ್ಣಾಗಿ
ಪಾವನವಾಗಲಿ ಪಶು ಪಕ್ಷಿಗಳ ಆಹಾರವಾಗಿ
ವನಸಂಕುಲದ ಜೀವ ವಿಕಾಸಕೆ ಕುರುಹಾಗಿ
ಧಾನ ಧಾನಕ್ಕೆಲ್ಲಾ ಸಮಾಧಾನ ದೊಡ್ಡದು
ಕುಕೃತ್ಯ ವಿಚಾರ ಸಾವದಾನವೂ ಸಲ್ಲದು
ಆಟವಾಡಿ ಓದಿ ಕಲಿಯಬೇಕಾದ ಬಾಲೆ
ನಕ್ಕು ನಲಿಯುವ ಮುನ್ನ ಉಟ್ಟು ಸ್ಯಾಲೆ
ಕೀಚಕರ ಕಣ್ಣು ಬಿದ್ದಿತಲ್ಲ ಮಗುವ ಮ್ಯಾಲೆ
ಅದೆಷ್ಟು ದಿನಗಳಿಂದ ಕಾದಿದ್ದರೋ ಸಂಗರು
ಸಂಘವ ವಿಂಗಡಿಸಿ ಅದ್ಹ್ಯಾಗೆ ಮುಗಿಬಿದ್ದರು
ಅನಾಯಾಸ ಅತ್ಯಾಚಾರಕೆ ಸಿಲುಕಿಸಿದರು
ಹೃದಯ ಹೀನ ಕ್ರೂರ ಕ್ರಿಮಿಗಳು ಐವರು
ಹಸುಳೆಯ ಹಿಸುಕಲು ಹಿಂಡು ಕಟ್ಟಿದವರು
ಷಂಡ ಭಂಡ ದಂಡ ಪಿಂಡ ಪಾಷಾಂಡಿಗಳು
ಅರಿವಿಗೆ ಬರದಾಯಿತೇ ಮಗಳ ಗೋಳು
ಮನ ಕರಗಿಸಲಿಲ್ಲವೇ ದಾನಮ್ಮನ ಅಳು
ಪಾಪಗಳೇ ಷಂಡರಾಗಿರಿ ಇನ್ನೂ ಜನ್ಮವೇಳು
ಮುಗಿಯದ ಕಣ್ಣೀರಾಗಲಿ ನಿಮ್ಮಯ ಬಾಳು
ಕಿಡಿಗೇಡಿಗಳ ಹಿಂದೆ ಮತಿಗೇಡಿಗಳದೆಷ್ಟು
ನ್ಯಾಯವಾದಿಗಳೇ ವಹಿಸದಿರಿ ದಯವಿಟ್ಟು
ನಿಮ್ಮದೇ ಮಗಳೆಂದು ಮಾಡಿ ಮನದಟ್ಟು
ಧನಕ್ಕಿಂತ ಮಾನವೀಯತೆಗೆ ಬೆಲೆ ಕೊಟ್ಟು
ಕೃಷ್ಣ ಜನ್ಮ ಸ್ಥಾನಕ್ಕಟ್ಟಿ ಸ್ಥಿರ ಗಮನವನ್ನಿಟ್ಟು
ಸಮಾಜಕೆ ಅಂಗವಿಕಲತೆ ಉಂಟಾಯಿತೇ?
ಭಾರತದ ಸಂಸ್ಕೃತಿ ಹಾಲಾಹಲವಾಯಿತೇ?
ಸಂವಿಧಾನದ ತಿದ್ದುಪಡಿ ಮಾಡಿರಿ ಸಮರ್ಥ
ಅಪರಾಧಿ ಅಪ್ರಾಪ್ತ ಎಂಬುದರಲ್ಲಿ ಅನರ್ಥ
ಶಿಕ್ಷೆ ನೀಡಲೇಬೇಕಿದೆ ಸರ್ವಕಾಲಕೂ ಸರ್ವತ್ರ
ಜಗವೆಲ್ಲಾ ಭರತ ಖಂಡವ ಗುಣಿಸಿ ಭಾಗಿಸಿ
ಭಾರತ ಸಂಸ್ಕೃತಿಯ ಪ್ರಭಾವಕ್ಕೆ ಮೋಹಿಸಿ
ನಡೆದು ಬರುತ್ತಿವೆ ನಮ್ಮನ್ನು ಅನುಸರಿಸಿ
ಓ ನನ್ನ ಭಾರತದ ಪ್ರಜೆಗಳೇ ಗಮನ ಹರಿಸಿ
ಪಾಶ್ಚಿಮಾತ್ಯ ಸಂಸ್ಕೃತಿಗಳ ದೂರ ಸರಿಸಿ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೧/೧೨/೨೦೧೭
Comments
Post a Comment