ಗಝಲ್ ೯

ಗಝಲ್ ೯
~~~~~~
ಅಮ್ಮನ ಕಷ್ಟವ ಅರಿತು ಹೋದೆ ಶಾಲೆಯ ಬಿಟ್ಟು ನಿಜ ಗೆಳೆಯ
ಹೊಟೇಲಿನಲ್ಲಿ ರುಬ್ಬುತ್ತಿರುವೆ ಮಸಾಲೆ ದೋಸೆ ಹಿಟ್ಟು  ನಿಜ ಗೆಳೆಯ

ಕೊಟ್ಟು ಬಿಟ್ಟೆ ತನುಮನವ ಆಕೆಯ ನಂಬಿಬಿಟ್ಟು
ವರಿಸಿಬಿಟ್ಟಳು ಸಿರಿವಂತನ. ನಂಬಿದ ನನಗೆ ಕೈ ಕೊಟ್ಟು  ನಿಜ ಗೆಳೆಯ

ಕೈಗಡ  ಪಡೆಯುವ ಮುನ್ನ ನೀಡಿದೆ ಒಡವೆಗಳ.
ಬಡವನಾದರೂ ಬೇಡವಣ್ಣ ಎಂದ ನಂಬಿಕೆಯಿಟ್ಟು ನಿಜ ಗೆಳೆಯ

ಆಗರ್ಭ ಸಿರಿವಂತನ ನೌಕರಿ ಮಾಡಿದೆನಾದರೂ
ಅಪದ್ದವನಾಡಿದ ಸರಿಯಾದ ಪಗಾರ ಕೊಡುವುದ ಬಿಟ್ಟು ನಿಜ ಗೆಳೆಯ

"ಸಿಡಿಲು" ನು ಸಿಡಿಮಿಡಿಗೊಂಡರೆ ಜಗವದು ನಿಲ್ಲುವುದೇ ತನ್ನ ನಿತ್ಯ ನರ್ತನವ ಒತ್ತಿ ಬದಿಗಿಟ್ಟು ನಿಜ ಗೆಳೆಯ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೦/೧೨/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು