ಸುಂದರಾಂಗಿಯರು
ಸುಂದರಾಂಗಿಯರು
~~~~~~~~~~~
ತುಂಬಿದಾ ಕೊಡ ಹೊತ್ತು ಬಳುಕುವ
ನಡುವದು ಉಳುಕಿತೇನೋ ಎಂಬಂತೆ
ನಡೆಯುತ್ತಿದ್ದ ಚೆಲುವೆಯರ ಸೊಬಗು
ಕಾಣದಂತಾಗಿಸಿದ ನಲ್ಲಿ ನೀರಿನ ಮೇಲೆ
ನಮ್ಮಗಳಿಗೆ ಉಂಟಾಗಿದೆ ಬಾರೀ ಕೋಪ
ನಲ್ಲಿ ನೀರು ಬಂದೊಡನೆ ಗಲ್ಲಿ ಗಲ್ಲಿಯಲ್ಲಿ
ಅಳಿದುಳಿದ ಪಾತ್ರೆ ಪಗಡೆಗಳ ಜೊತೆಯಲ್ಲಿ
ನೆನೆಸಿದ್ದ ಬಟ್ಟೆಗಳನ್ನು ಸೋಪಿನ ನೀರಿನಲ್ಲಿ
ಒಗೆಯುತ್ತಿದ್ದ ಬಡ ನಡುವಿನ ಚೆಲುವೆಯರೆಲ್ಲಿ
ಹಾಗಾಗಿ ಸಂಪು ಕಟ್ಟಿದ ಗಾರೆಕಾರನಿಗೆ ಶಾಪ
ಮನೆ ಮುಂದೆ ಬಾಗೀ ತೂಗಿ ಬಳುಕಿ ಏಗಿ
ಚುಕ್ಕಿ ಗೆರೆಯ ಸೇರಿಸಿ ರಂಗೋಲಿ ಹಾಕಿ
ಹೃದಯದ ಅರಮನೆಗೆ ರಂಗು ತಂದಾಕಿ
ಇಂದು ರಂಗು ರಂಗಿನ ಬಣ್ಣವ ಬಳಿದ
ರಂಗವಲ್ಲಿಯ ಕಂಡು ಮನ ಮರುಗುತ್ತಿದೆ ಪಾಪ
ದುಡಿಯುವ ಮಹಿಳೆಯರು ದಣಿಯದಿರಲೆಂದು
ಮಿಕ್ಸಿ, ವಾಸಿಂಗ್ ಮಿಷನ್, ನೆಲ ಒರೆಸಲೊಂದು
ಕಸ ಗುಡಿಸಲು ಮತ್ತೊಂದು ಯಂತ್ರಗಳು ಬಂದು
ಸೊಂಟದ ಸುತ್ತಲೂ ಕೊಬ್ಬಿನ ಚಕ್ರಗಳನ್ನು ತಂದು
ವಾಕಿಂಗ್ ಯೋಗಾಭ್ಯಾಸದ ಬದಲಾವಣೆಯಿಂದು
ಕೈಯಲ್ಲಿ ರುಬ್ಬಿದ ಇಡ್ಲಿ ದೋಸೆಗಳ ರುಚಿ ಮಾಯ
ಐದಕ್ಕೆ ಎದ್ದು ಹೊಸಲು ತೊಳೆಯದಾಗಿದೆ ಕಾಯ
ಅಲಂಕಾರದ ಬಣ್ಣಕ್ಕೆ ನೈಜ ಸೌಂದರ್ಯಕೆ ಗಾಯ
ಅವಧಿಗೂ ಮುನ್ನ ಏರುವಂತಿದೆ ಆಂಟಿಯರ ಪ್ರಾಯ
ಮಹಿಳೆಯರು ಕಾದಿದ್ದಾರೆ ಕೇಳಲು ನಮ್ ಸುದ್ದಿ
ನಮ್ ಬುದ್ದಿ ಅದೆಲ್ಲಾ ಕಟ್ಗೊಂಡು ನಿನಗೇನಯ್ಯಾ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೭/ ೧೨/೨೦೧೭
Comments
Post a Comment