ಚುಟುಕುಗಳು ೧೫
ಚುಟುಕುಗಳು
======
ಗರ್ಭಿಣಿ
~~~~~
ಗರ್ಭಿಣಿ ದುಡಿಯದೇ
ಮೇಲೆತ್ತಿ ಸಿಕ್ಕಿಸಿ ಸೀರೆಯನ್ನು
ವೈದ್ಯರು ಸಲಹೆಯಿತ್ತರು
ಶಸ್ತ್ರಚಿಕಿತ್ಸೆ ಸಿಸ಼ೇರಿಯನ್ನು
ಕೊಡ
~~~
ಕೊಡ ಹೊತ್ತ ನಡುವಲ್ಲಿ
ಮಗು ಕುಳಿತಿತ್ತು ನಗು ನಗುತ್ತಲಿ
ನಲ್ಲಿ ತಿರುಗಿಸಿದ ಕೈಯಲ್ಲಿ
ಕಿವಿ ಹಿಂಡಿಸಿಕೊಂಡ ಮಗುವಿತ್ತು ಅಳುತ್ತಲಿ
ರಂಗವಲ್ಲಿ
~~~~~~
ನಡು ಬಾಗಿಸಿ ಹಾಕಿದಳು
ಮಹಿಳೆ ರಂಗವಲ್ಲಿ
ಮನೆ ಮನವು ತುಂಬಿತ್ತು
ತುಳುಕುತ್ತಿತ್ತು ನಗೆಗಡಲಲ್ಲಿ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೬/೧೨/೨೦೧೭
Comments
Post a Comment