ಚೀತ್ಕಾರ

ಚೀತ್ಕಾರ
~~~~~

ಕಿಚ್ಚು ಹಚ್ಚಿಬಿಡು ನಿನ್ನ ಆಸೆಗೆ
ಹಚ್ಚದೇ ಬಿಡದೀ ಕಿಚ್ಚು ಚಿತೆಗೆ
ಹೇಳಲಿ ಏನು ಮನುಜರೆದೆಗೆ
ನಿನ್ನ ಮೋಜಿಗೆ ನನಗೆ ರೇಜಿಗೆ

ಹಸಿದ ಹೊಟ್ಟೆಗೆ ಬರೆ ಎಳೆದೆ
ಹೇಸಿಗೆ ಹುಟ್ಟಿಗೆ  ತೆರೆ ಕಳೆದೆ
ಮಾಸಿದ ಉಡುಗೆ ಕಿತ್ತು ಎಸೆದೆ
ಹೊಳೆವ ಮನವ ಗಮನಿಸದೇ

ಅರಿಯದಾಯಿತೆ ನನ್ನ ಚೀತ್ಕಾರ
ಅಳಿಯಲಿ ಮನದ ಅಹಂಕಾರ 
ಅಳಿಸಿತು ಬಾಳುವೆ ಮಮಕಾರ
ಅರಿಯದೇ ಹೋದೆ ಸಾಕ್ಷಾತ್ಕಾರ

ಬಡತನದ ಬೇಗೆಗೆ ಹಣದ ಋಣವೇ
ಬಡವರ ಭಾವನೆಗೆ ಕಡು ಬಡತನವೇ
ಬಡವಾದರೂ "ಮಾನ" ಬಿಡುವುವೇ
ಮಾನವಂತ ಮನಕೆ ಎಂದೂ ಸಾವೇ

*ಸಿಡಿಲು*
*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೨೨/೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು