ಪ್ರಮಾದ

ಪ್ರಮಾದ
=================

ಜಗದೊಳು ಇಂದು ವಾದವೇ ಮುಂದು
ತಾಳಲಾರದೆ ಏನೂ ಯಾವೊಂದು
ಚಿಲ್ಲರೆಗಾಗಿ ನಿರ್ವಾಹಕರೊಂದಿಗೆ ವಾದ
ಬ್ಯಾಂಕಿನ ಸರತಿ ಸಾಲಿನಲ್ಲಿ ವಾದ

ಕೌಂಟರಿನಲ್ಲಿ ಮತ್ತೆ ನೋಟಿಗೆ ವಾದ
ಕಿಶೋರಿಯೆಡೆ ನೋಡಿದ ನೋಟಕ್ಕೆ ವಾದ
ಪೋಲೀಸು ಠಾಣೆಗೆ ಹೋಗುವ ಹಾಗೆ ವಿವಾದ
ಕೋರ್ಟಿಗೆ ಹೋದರೆ ಪ್ರಮಾದ

ತಂದೆಯ ಮರಣದ ಮರುದಿನ ಆಸ್ತಿಗಾಗಿ
ನಡೆದರೂ ಮಕ್ಕಳು ಮುಂದಿನ ಕೇಸಿಗಾಗಿ
ಹುರಿದುಂಬಿಸಿ ಬಂಧುಗಳು ಅಸೂಯೆಗಾಗಿ
ಸೋತು ಹೋದರು ಮಕ್ಕಳು ನ್ಯಾಯಕ್ಕಾಗಿ

ಮಿಡಿಯಲಿಲ್ಲ ಮನ ತಾಯಿಗಾಗಿ
ಹರಸಾಹಸ ಮಾಡಿದರು ತುತ್ತು ಕೂಳಿಗಾಗಿ
ಇಂದು ಕಿತ್ತಾಡುವರು ಅಮ್ಮನಿನಾಗಿ
ಬ್ಯಾಂಕಿಗ್ಹಾಕುವ ಎರಡುವರೆ ಲಕ್ಷಕ್ಕಾಗಿ
ಎಂದು ಕೊರಗುವವರೆ ಕಪ್ಪು ಹಣಕ್ಕಾಗಿ

ಅಮ್ಮನ ಕೊರಳ ಕಾಸಿನ ಸರಕ್ಕಾಗಿ
ಬಿಡದೆ ಕಾದಿದ್ದರು ಹೋಗುವ ಪ್ರಾಣಕ್ಕಾಗಿ
ಎಲ್ಲವೂ ಮಾನವನ ದುರಾಸೆಗಾಗಿ
ಅತಿಯಾಸೆ ಬಿಟ್ಟು ಬಾಳೋಣ ಮಾನವಂತರಾಗಿ

ವೈಲೇಶ ಪಿ ಯೆಸ್
ಕೊಡಗು
18/11/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು