ಸಿ ಡಿ

ಶ್ರೀ ಪ್ರಕಾಶ್ ಅಂಬರಕರರು ತಮ್ಮಿಂದ ನಾವೆಲ್ಲಾ ಪಾವನರು
ಎತ್ತಣ ಹಿರೇಕೆರೂರು ಎತ್ತಣ ಕೊಡಗಿನ ಡ್ರೈವರು
ಎತ್ತಣಿಂದೆತ್ತಣ ಗೆಳೆತನ ತಂದಿತ್ತಿದೆ ದೈವಕಾರಣ
ಅಲ್ಲಲ್ಲ ಮುಖಧರೆಯ ಕೃಪೆಯಿದುವೆ ಸಕಾರಣ
ಪ್ರಕಾಶ್ ಅಂಬರಕರರಿಗೆ ನನ್ನ ಸಾಷ್ಟಾಂಗ ನಮನ

ಗುರುಭಕ್ತಿಗೆ ಪೆಸರು ಶ್ರೀ ಪ್ರಕಾಶ್ ಅಂಬರಕರರು
ಶಿಕ್ಷಕ ವೃತ್ತಿಗೆ ಪೆಸರು ಶ್ರೀ ಚೆನ್ನಬಸಣ್ಣ ಗೌಡ ಯತ್ನಳ್ಳಿಯವರು
ಪತಿ ಪಾರಾಯಣೆ ಉಷಾಕ್ಕ ನಮ್ಮೆಲ್ಲರ ಕಾವ್ಯ
ಸಾಹಿತ್ಯ ಲೋಕ ಪಾದಾರ್ಪಣೆಗೆ ಕಾರಣವಕ್ಕಾ
ಎತ್ತಣ ವಿಶ್ರಾಂತ ಜೀವನ ಪ್ರಾರಂಭ ಅಂದಿನಿಂದಲೇ
ಸಾಹಿತ್ಯ ಸೇವೆಯ ಮಹದಾರಂಭ ಸಂಭವ

ಎಲ್ಲಿಯ ಬೀದರ್ ಏನ್ ಇವರ್ ಖದರ್
ಎಪ್ಪತ್ತಕ್ಕೂ ಹೆಚ್ಚು ಇವರು ಬರೆದ ಪುಸ್ತಕ
ಇದುM.G. Deshpande ಅಣ್ಣಾವ್ರ ಮಸ್ತಕ
ಗೀತೆ ಗಾಯನ ಗಾನವೃಂದದವರಿಗೆ ಸಮ್ಮಾನ
ಗೀತೋನ್ನತಿ ಶ್ರಮಿಕರಿಗೆ ತುಂಬು ಬಹುಮಾನ
ಗಳಿಸಿದರು ಬಳಗ ಸದಸ್ಯರ ಅಭಿಮಾನವನ್ನ

ಎತ್ತಣ ರೋಟರಿ ಕ್ಲಬ್ ಎತ್ತಣ ಕನ್ನಡ ಪ್ರೇಮ
ಹೊಸತು ಬಯಸುವ ಮನ ಶಶಿಕಾಂತ ಬೊಮ್ಮಣ್ಣರವರು
ಮನದುಂಬಿ ಕಾರ್ಯಕ್ರಮದ ಅಚ್ಚುಕಟ್ಟು ಮೆರೆಸಿದರು
ರೋಟರಿ ಸರ್ವ ಗೆಳೆಯರನು ರವಿಕುಮಾರ್ ಆಧಿಯಾಗಿ ಸಾಲದು ಎಷ್ಟು ಕೊಂಡಾಡಿದರೂ
ಜಗದ ರೋಟರಿ ಕ್ಲಬ್ಬಿಗೇ ಇವರು ಮಾದರಿಯಾದರು

ಹೊನ್ನ ಮನದ ಚಿನ್ನದಂತ ಕವಿಗೆಳೆಯರು
ಇವರನ್ನೆಲ್ಲಾ ಎಲ್ಲಿಂದ ಹೆಕ್ಕಿ ತಂದರು
ಗೀತೋನ್ನತಿಗೆ ಸಂಧ್ಯಾಲಕ್ಷ್ಮೀಯವರು ಶ್ರಮಿಸಿದರು
ತಾಳಮೇಳಗಳುನ್ನತಿಗೆ ಮಾರುತಿ ಮಿರಸ್ಕರರು
ಸ್ವಯಂ ರಚಿಸಿ ಉಲಿದವರು ಕಪಿಲಾ ಶ್ರೀಧರ್

ಕೊರಳನಿತ್ತವರು ಅಜಯ್ ವಾರಿಯರ್, ಪ್ರೇಮ್ಸಾಗರ್,
ಸುರೇಖ ಕೆಎಸ್ ಚಿನ್ಮಯಿ ಅತ್ರೇಯಸ್  ಅನಂತ ಕುಮಾರ್, ಸುರೇಶ್ ಬಿವಿಎನ್, ಶ್ರೀನಿವಾಸಮೂರ್ತಿ,
ಸಂ ಸಂಕಲಿಸಿ ತುಂಬಿದರು ಸಿಡಿಯ ಚೇತನ್ ರವರು

ಕವಿಗೋಷ್ಠಿಯೆಂದರೆ ಶೊತೃಗಳು ವಿರಳ
ಆದರಂದು ತುಂಬಿತ್ತು ಸಭಾಂಗಣ ಬಹುಳ
ವದನಾರವಿಂದವರಿಯದ ಗೆಳೆಯರನೇಕ
ಕಂಡೊಡನೆ ಕರಪಿಡಿದು ಮನಕ್ಕಿಳಿದವರಿಗುಂಟೆ ಲೆಕ್ಕ  ಅದೆಷ್ಟು ಅಣ್ತಮ್ಮ ಅಪ್ಪವ್ವ ಅಕ್ತಂಗೇರು ಅಕ್ಕ ಪಕ್ಕ
ಕಂಡು ಕಣ್ಣು ತುಂಬಿತ್ತು ಉಳಿದಿಲ್ಲೇನು ಹೇಳಾಕ

ಹಾಡುಗಳು ಗುನುಗುನಿಸೆ ಚಂದ ಕೇಳಾಕ
ಗುನುಗುನಿಸಿ ನೆನಪಳಿಯದಿರೆ ಜೊತೆಗೇ ಪುಸ್ತಕ
ಪ್ರಕಾಶ್ ಅಂಬರಕರರೆ ಏನು ತಮ್ಮ ಮಸ್ತಕ
ಜೊತೆಗಿದ್ದರು ಶಶಿಕಾಂತರಾವ್ ರಾಜ್ ಆಚಾರ್ಯ
ಸರ್ವ ಕಾರ್ಯದ ಶುಭ ಮಹಾಸಾಧನಕ
ಹಾಡಿ ಹೊಗಳುವರೆಲ್ಲಾ ಇನ್ನೂ ಚಿಂತ್ಯಾಕ.

ಮುಗಿಲ ಮರೆಯಲ್ಲಿ ವಡ್ಡಗೆರೆ ನಾಗರಾಜಯ್ಯರು
ವಿಮರ್ಶೆ ಮಾಡುವ ಮನಕೆ ಮನೆಗೆಲಸವು ಜೊತೆಗೆ
ಸೊಗಸಾದ ನುಡಿಗಳು ಕವಿತಾ ರವಿಶಂಕರರೆ
ಹೊನ್ನ ನುಡಿಗಳಾಡಿದ ಸಿದ್ರಾಮ ಹೊನ್ಕಲ್ ರವರೆ
ನಿಜಕವಿಗಳೆಲ್ಲ ತಮ್ಮ ನುಡಿಗಳ ಹೊಗಳುವವರೆ
ಏನು ನುಡಿಯಲ್ಲಿ ತಮ್ಮ ಮನದಿಂಗಿತಕೆ ನಾನರಿಯೆ

ಉಪಹಾರ ಉಪ್ಪಿಟ್ಟು ಕೇಸರಿ ಭಾತು
ಮುಗಿಯಲಾರದ ಗೆಳೆಯರ ಮಾತು
ಮಧ್ಯಾಹ್ನ ಮೊಸರನ್ನ ಜಾಮೂನು ವಾಂಗೀಭಾತು
ಉಂಡರೆಲ್ಲರೂ ಅಲ್ಲಲ್ಲಿ ಸೆಲ್ಫೀಯೊಂದಿಗೆ ನಿಂತು ಕೂತು ಗತನೆನಪಿಗೆ ಮಂಗಳೂರು ಗೋಳಿಬಜೆ ಚಹ ಸಂಜೆ

ಕವಿತೆಗಳ ಸವಿ ಸವಿದು ಹೃನ್ಮನಗಳ ಬೆಸೆದು
ಬಂದತಿಥಿಯರು ಹೊರಟರು ಅವರವರೂರಿಗೆ
ಕವಿ, ಗೀತಚೇತನದ ರವಿ,ಅತಿಥಿಯರು.
ಉಳಿದರು ಅತಿಥೇಯರು ನೆನಪಿನಂಗಳದ ಶಶಿಯಾಗಿ ಇದ ಹೊಗಳತ್ತಲಿರುವರು ತಿಂಗಳು ಇನ್ನಾರು.

ಪ್ರೇಮಿನಲಿ ಬಂಧಿಸಿದರು ಫೋಟೊಗ್ರಾಫಿ ಚತುರರು
ವಾಟ್ಸಅಪ್ ನಲ್ಲಿ ಎಲ್ಲರೂ ಹಂಚಿಕೊಳ್ಳುತಿಹರು
ಕೊನೆಯ ಕೆಲ ಗಳಿಗೆಯಲಿ ಕೈ ಕೊಟ್ಟಿತು ಬ್ಯಾಟರಿ
ಗೆಳೆಯರೆ ಸ್ವಲ್ಪ ನನಗೂ ಪೋಟೊ ಕಳಿಸಿರಿ ಅದುವೇ ನಮ್ಮ ಐಸಿರಿ ಏರುತಲಿರಲಿ ಕನ್ನಡ ಕಂದರದಿಂ ಮೇರುಗಿರಿ.

ಮಿತ್ರಾತ್ಮೀಯರೆ ಒಂದು ಸುಂದರ ಕಾರ್ಯಕ್ರಮವನ್ನು
ಹೀಗೂ ಹೊಗಳಬಹುದೇ ಎನಿಸಿತು ತಪ್ಪಾಗಿದ್ದರೆ ಕ್ಷಮಿಸಿ ಯಾರ ಹೆಸರು ಬಿಟ್ಟು ಹೋಗಿದ್ದೀರೂ ಇನ್ಬಾಕ್ಸಿಗೆ ಬನ್ನಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.

ಎಂದೆಂದಿಗೂ ಕನ್ನಡಮ್ಮನ ಸೇವೆಯಲಿ  ತಮ್ಮವ
 
  ವೈಲೇಶ ಪಿ ಎಸ್
ವಿರಾಜಪೇಟೆ
ಕೊಡಗು
1/12/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು