ಗುಟುಕು

ಗುಟುಕು
~~~~~
ಇರುಳು ಅರಳುವ ಮುನ್ನ
ಸೇರಿರೆ ಗೂಡಿನೊಳು ಚೆನ್ನ
ಅಂಬರ ಹೊಳೆಯುವ ಚಿನ್ನ
ರವಿ ಜಾರಿದ ಮೇಲೆ ಇನ್ನೇನ

ಸುತ್ತಲೂ ಬಿತ್ತಲು ಕತ್ತಲು
ಸಾಧ್ಯವೇ ಕತ್ತೆತ್ತಿ ಕಾಣಲು
ಮರಿಗೆ ತಿನಿಸು ತಿನಿಸಲು
ಮತ್ತೆ ಬರಬೇಕಿದೆ ಹಗಲು 

ಸಾಗದಾಗಿದೆ ಮುಗಿಲು 
ರೆಕ್ಕೆ ಬೀಸಿ ಹಗಲಿರುಳು
ತಾನುಂಡು ಮರಿಗಳಿಗೆ
ಗುಟುಕು ಹೊತ್ತು ತರಲು

ಇರಲೆಮ್ಮ ಮೇಲೆ ಕರುಣೆ
ನಮಗೆ ಏಕಿಂತಹ ಬವಣೆ
ನಮಗೂ‌ ಇಲ್ಲವೆ ಭಾವನೆ
ಆಹಾರವೇ ಸಕಲರ ತಪನೆ

ವೈಲೇಶ ಪಿ ಯೆಸ್
ಕರಾರಸಾಸಂಸ್ಥೆ ಮಡಿಕೇರಿ ಚಾಲಕ
೧೫/೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು