ಗಝಲ್ ೪

ಗಝಲ್ ೪
~~~~~~~

ನನ್ನದು ಎನ್ನದಿರು ನಿನ್ನದಿದು ನನ್ನದೇನು ಗೆಳೆಯ
ನಿನ್ನದು ಎಂದೊಡೆ ಮತ್ತೆ ಮತ್ತಾರಿಗೂ ಪಾಲಿಲ್ಲ‌ ನನ್ನದೇನು ಗೆಳೆಯ

ಇಹದೊಳಗೆ ತುಂಬಿರುವ ನುಡಿಯೆಂದರೆ ನನ್ನದು ನನ್ನದು
ಇದರೊಳಗೆ ತುಂಬಿ ತುಳುಕುತ್ತಿರುವ ಸ್ವಾರ್ಥವೇ  ನಾನು ಗೆಳೆಯ

ಬಲ್ಲವರು ನುಡಿದೊಡೆ ಜಗ ಭಾವಿಸುವುದೇನು
ಎಲ್ಲವನು ತಿಳಿದವರು ನುಡಿದರು ನಾನಲ್ಲ ಅದು ಆನು ಗೆಳೆಯ

ನಾನು ನಾನೆನ್ನದೇ ನೀನೆಂದೊಡೆ ಜಗವು ನಿನಗೀಯುವುದು
ನಿನಗೀಯುವ ಗುಣವಿದ್ದೊಡೆ ಮನ ಕುಣಿಯುವದು
ತಾನು ಗೆಳೆಯ

ನೀನಿಲ್ಲದೇ ಜಗವಿಹುದೇ ಅರಿಯದೇ ಹೋದೆನೆ
ಕಣಕಣದಲಿ ಬೆರೆತ ನೀನಿಲ್ಲದೇ ನಾನು ನೀರಿಲ್ಲದ ಮೀನು ಗೆಳೆಯ

ನಿನ್ನ ಅನುಗ್ರಹವಲ್ಲದೇ ಎನಗಾರು ಇಲ್ಲವಯ್ಯ
ನಿನ್ನ ಅನುಗ್ರಹದಿಂ ಅಪಜಯವ ನೀಡದೇ ಕಾಯುವೆ
ಅಲ್ಲವೇನು ಗೆಳೆಯ

"ಸಿಡಿಲು" ನ ಪರಪಂಚದಲಿ ತುಂಬಿದ ನುಡಿಯೆಂದರೆ
ಅದೆಂದಿಗೂ ನಿನ್ನ ನಾಮಸ್ಮರಣೆಯೊಂದೇ ಈ‌ ಜಗವ ರಕ್ಷಿಸುವೆಯಾ ನೀನು ಗೆಳೆಯ

"ಸಿಡಿಲು"
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೨/೧೧/೩೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು