ಲೋಕಪಾವನೆ
ಲೋಕಪಾವನೆ
~~~~~~~~
ಸುರಿಯಿತು ಹೊನ್ನಿನ ಮಳೆಯಂತೆ
ಬೆರೆಯಿತು ಮಣ್ಣನು ಮಧುವಂತೆ
ಹರಿಯಿತು ಹಾಲಿನ ನೊರೆಯಂತೆ
ಬೆರೆಯಿತು ಕಾವೇರಿ ಕಡಲ ಜೊತೆ ||ಪ||
ಬಳಸಿದ ಊರಿಗೆ ಬೆಳೆಯನು ನೀಡುತ
ಬೆಳೆಸಿದ ಬೆಳೆಗೆ ಉಸಿರನು ಬೆರೆಸುತಾ
ಮೌನದಿ ನಲ್ಮೆಯ ಬೆಸುಗೆಯ ಸುರಿಸುತಾ
ಮಾತೆಯ ಮನದಲಿ ಮಮತೆಯು ತುಂಬಿತ್ತಾ
ರಾಜ್ಯದ ಜನರಿಗೆ ನೆರೆರಾಜ್ಯದ ಮನವಿಗೆ
ಕರುಣೆಯ ತೋರಿತ್ತಾ ಕಡಲನು ಬೆರೆಯಿತ್ತಾ ||೧||
ಜಾತಿ ವಿಜಾತಿಯ ಪೆಸರನು ತಿಳಿಯದೆ
ಧರ್ಮ ಅಧರ್ಮದ ಮೋಸಕೆ ಸೋಲದೆ
ನಾನು ನನದಿದು ಎಂಬುದು ಅರಿಯದೆ
ಸಕಲರ ಬದುಕಲಿ ಬೇಧವ ಮೆರೆಯದೆ
ಸರ್ವರ ಬಾಳಿಗೆ ಜ್ಯೋತಿಯ ಬೆಳಗಿತ್ತಾ
ಮನುಕುಲದೇಳಿಗೆ ಮನದಲಿ ಮೂಡಿತ್ತಾ
ಲೋಕಪಾವನೆಯ ಹೆಸರದು ಉಳಿದಿತ್ತಾ ||೨||
Comments
Post a Comment