ಗಝಲ್ ೬

ಗಝಲ್ ೬
~~~~~~~
ಜಗದ ಸಕಲಕೂ ಮಾತೆ ಜನುಮದಾತೆ ಹೆಣ್ಣು ಗೆಳತಿ
ಸರ್ವ ಜೀವ ಸಂಕುಲದ ಮಾತೆ ಜನುಮದಾತೆ ಹೆಣ್ಣು ಗೆಳತಿ

ಧರಣಿ ಮಂಡಲದ ಸಮಸ್ತ ಸೃಷ್ಟಿಗೆ ಮೂಲ ಆದವಳು
ಪುರುಷ ಪ್ರಕೃತಿಯ ಸಮ್ಮಿಲನಕೆ ಕುರುಹು ಆಗಿರುವ ಜೀವದಾತೆ ಹೆಣ್ಣು ಗೆಳತಿ

ತನ್ನೆಲ್ಲಾ ನೋವ ಮರೆತು ನಗುನಗುತಾ ನಲಿವಾಕೆ
ತನ್ನನ್ನೇ ಮರೆತು ನಗುನಗುತಾ ಮಗುವ ಸಲಹುವ ಮಹಾಮಾತೆ ಹೆಣ್ಣು ಗೆಳತಿ

ಹುಟ್ಟಿದ ಮನೆಗೂ ಪಾದ ಮೆಟ್ಟಿದ ಕೀರ್ತಿ ಮನೆಗೂ ತರುವವಳು
ಹುಟ್ಟಿದ ಮಕ್ಕಳಿಗೂ ಮನೆ ಮೆಟ್ಟಿದಾ ಮಕ್ಕಳಿಗೂ ಭಾಗ್ಯ ತರುವ ಭಾಗ್ಯದಾತೆ ಹೆಣ್ಣು ಗೆಳತಿ

ಸಕಲ ಯುಗಕೂ ಸಮನಾಗಿ ಸಕಲ ಸಾರವ ಅರಿತು ಬಾಳುವವಳಾಗಿ
ಸಂಸಾರ ಸಾಗರದಿ ದೋಣಿ ಸಾಗಲು ಸಹಕರಿಸುತಾ ಮೆರೆವ ನವ ವನಿತೆ ಹೆಣ್ಣು ಗೆಳತಿ

ಮಬ್ಬು ಕವಿದಿದ್ದ "ಸಿಡಿಲು" ನ ಬದುಕಿಗೆ ಬೆಳಕಾಗಿ ಬಂದವಳು
ಬಾಳು ಬೆಳಗಲು ವಂಶ ಬೆಳೆಯಲು ಸಹಕರಿಸಿದ ನನ್ನ ಬಾಳ ಕವಿತೆ ಹೆಣ್ಣು ಗೆಳತಿ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೩೦/೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು